ಅಂತಾರಾಷ್ಟ್ರೀಯಕ್ರೈಂ

ಮಾಸ್ಕೋದಲ್ಲಿ ಭೀಕರ ಭಯೋತ್ಪಾದಕ ದಾಳಿ- ಕನಿಷ್ಠ 50 ಸಾವುರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆದಿದ್ದು ಸಾವು ನೋವುಗಳು ಸಂಭವಿಸಿದ ಬಗ್ಗೆ ವರದಿಯಾಗಿದೆ.

ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣಕ್ಕೆ  ಐವರು ಭಯೋತ್ಪಾದಕರು ನುಗ್ಗಿದ್ದು ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ  ಸದ್ಯಕ್ಕೆ 50 ಜನರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸಾವಿನ ಸಂಖ್ಯೆ 100ರ ಗಡಿ ದಾಟುವ ಸಾಧ್ಯತೆಯಿದೆ ಎನ್ನಲಾಗಿದೆ.

ಗುಂಡಿನ ದಾಳಿ ಬಳಿಕ ಕಟ್ಟಡವು ಸ್ಫೋಟದಿಂದ ಹೊತ್ತಿ ಉರಿದಿದ್ದು ಕಟ್ಟಡದಲ್ಲಿ ನೂರಾರು ಜನ ಸಿಲುಕಿರುವ ಸಾಧ್ಯತೆ ಇದೆ. ಐವರು ಭಯೋತ್ಪಾದಕರ ಪೈಕಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ನಡೆದ ಭೀಕರ  ಭಯೋತ್ಪಾದನಾ ದಾಳಿ ಇದಾಗಿದ್ದು ವಿಶ್ವವನ್ನೇ ತಲ್ಲಣಗೊಳಿಸಿದೆ.

Leave a Reply

Your email address will not be published. Required fields are marked *

error: Content is protected !!