ಲೋಕಸಭೆ ಚುನಾವಣೆ: ದಿನಾಂಕ ಪ್ರಕಟ: 7 ಹಂತಗಳಲ್ಲಿ ಚುನಾವಣೆ
ಲೋಕಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಶನಿವಾರ (ಮಾರ್ಚ್ 16) ಘೋಷಿಸಿದೆ. ದೇಶಾದ್ಯಂತ 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ.
ಏಪ್ರಿಲ್ 19ರಂದು ಮೊದಲ ಹಂತದ ಮತದಾನ ನಡೆಯಲಿದೆ. 2ನೇ ಹಂತ ಏಪ್ರಿಲ್ 26ರಂದು ಕರ್ನಾಟಕದಲ್ಲಿ ಮತದಾನ, ಮೇ 7ರಂದು ಮೂರನೇ ಹಂತ, ಮೇ 13ರಂದು 4ನೇ ಹಂತದ ಮತದಾನ, ಮೇ 20 5ನೇ ಹಂತ, ಮೇ 25ಕ್ಕೆ 6ನೇ ಹಂತ, ಜೂನ್ 1ಕ್ಕೆ 7ನೇ ಹಂತದ ಮತದಾನ ನಡೆಯಲಿದೆ.