ರಾಜ್ಯದಲ್ಲಿ ಶೀಘ್ರದಲ್ಲೇ ಗೋಬಿ ಮಂಚೂರಿ ನಿಷೇಧ..?
ರಾಜ್ಯ ಸರಕಾರವು ಅಸುರಕ್ಷಿತ ಗೋಬಿ ಮಂಚೂರಿಗಳನ್ನು ನಿಷೇಧಿಸಲು ಮುಂದಾಗಿದೆ. ಜನರ ನೆಚ್ಚಿನ ತಿನಿಸುಗಳಲ್ಲಿ ಒಂದಾದ ಗೋಬಿ ಮಂಚೂರಿ ರಾಜ್ಯದಲ್ಲಿ ಶೀಘ್ರದಲ್ಲೇ ನಿಷೇಧವಾಗುವ ಸಾಧ್ಯತೆಯಿದೆ.
ಇತ್ತೀಚೆಗೆ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ ವಿವಿಧ ಬಗೆಯ ಗೋಬಿ ಮಂಚೂರಿಗಳಲ್ಲಿ ಅಸುರಕ್ಷಿತ ಹಾಗೂ ಅಪಾಯಕಾರಿ ರಾಸಾಯನಿಕ ಪತ್ತೆಯಾಗಿದ್ದು ಈ ಹಿನ್ನೆಲೆಯಲ್ಲಿ ಹೀಗಾಗಿ ರಾಜ್ಯ ಸರಕಾರವು ಅಸುರಕ್ಷಿತ ಗೋಬಿ ಮಂಚೂರಿಗಳನ್ನು ನಿಷೇಧಿಸಲು ನಿರ್ಧರಿ
ಸಿದೆ ಎಂದು ತಿಳಿದು ಬಂದಿದೆ.
ಆಹಾರ ಮತ್ತು ಸುರಕ್ಷತೆ ಇಲಾಖೆಯು ಸಲ್ಲಿಸಿರುವ ವರದಿ ಆಧರಿಸಿ ನಿರ್ಧಾರ ಕೈಗೊಳ್ಳಲು ಸರಕಾರ ಮುಂದಾಗಿದೆ ಎನ್ನಲಾಗಿದ್ದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಗೋಬಿ ಮಂಚೂರಿ ನಿಷೇಧಿಸುವ ಕುರಿತು ಅಧಿಕೃತವಾಗಿ ಘೋಷಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.