ಕಾಂಗ್ರೆಸ್ ವಿರುದ್ಧ ಶೆಟ್ಟರ್ ವಾಗ್ಧಾಳಿ
70 ವರ್ಷ ಅಧಿಕಾರ ಅವಧಿಯಲ್ಲಿ ಕಾಂಗ್ರೆಸ್ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದ 70 ವರ್ಷ ಕಾಂಗ್ರೆಸ್ ಆಡಳಿತ ಮಾಡಿದೆ. ಅವರು ಏನೆಲ್ಲ ಮಾಡಿದ್ದಾರೋ, ಅದೆಲ್ಲ ಜನಕ್ಕೆ ಗೊತ್ತು. ಗರಿಬಿ ಹಠಾವೋ ಎಂದು ಹೇಳಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 10-15 ವರ್ಷ ಅಧಿಕಾರ ಮಾಡಿದ್ದರು ಎಂದು ಅವರು ಹೇಳಿದರು.

ನಮ್ಮ ಜೊತೆ ಸ್ವಾತಂತ್ರ್ಯ ಪಡೆದ ಜಪಾನ, ಚೀನಾ ಎಷ್ಟು ಮುಂದುವರೆದಿವೆ. ನಾಶವಾದ ದೇಶಗಳು 30 ವರ್ಷಗಳಲ್ಲಿ ಮತ್ತೆ ಎದ್ದು ನಿಂತಿವೆ. ಆದರೇ ಕಾಂಗ್ರೆಸ್ 70 ವರ್ಷ ಏನು ಮಾಡಿದೆ. ನಾವು ಬಂದಾಗಿನಿಂದ ರಾಷ್ಟ್ರೀಯ ರಸ್ತೆಗಳನ್ನು ಮಾಡಿದ್ದೇವೆ. ವಾಜಪೇಯಿ ಅವರು ಇದ್ದಾಗ ಸರ್ಕಾರ ಉತ್ತಮವಾದ ರಸ್ತೆ ನಿರ್ಮಾಣ ಮಾಡಿದೆ. ಆದರೇ ಇವರು ಏನು ಮಾಡಿದ್ದಾರೆ. ಈಗ ಲೋಕಸಭೆಯಲ್ಲಿ 46 ಸೀಟ್ ಬಂದಿವೆ. ಅದನ್ನು ಉಳಿಸಿಕೊಳ್ಳಲು ಮೊದಲು ಪ್ರಯತ್ನ ಮಾಡಲಿ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಜಗದೀಶ್ ಶೆಟ್ಟರ್ ಅವರು ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಗೊಂಡು ಬಳಿಕ ಕೆಲವೇ ತಿಂಗಳಲ್ಲಿ ಬಿಜೆಪಿ ಸೇರಿದ್ದರು.