ದ.ಕ ಜಿಲ್ಲೆಯಲ್ಲಿ ನಾವು ಗೆಲ್ಲುತ್ತೇವೆ-ಡಿಕೆಶಿ
ಮಂಗಳೂರು: ದಕ ಜಿಲ್ಲೆಯಲ್ಲಿ ಈ ಬಾರಿ ನಾವು ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಮಂಗಳೂರಿನಲ್ಲಿ ಸಮಾವೇಶ ಮಾಡುತ್ತಾ ಇದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸಂಜೆ ಏಳು ಗಂಟೆ ಬಳಿಕ ಮಂಗಳೂರು ಡೆಡ್ ಸಿಟಿ ಆಗಿದೆ. ಈ ಜಿಲ್ಲೆಯ ಬಗ್ಗೆ ನಾವು ಹೊಸ ಅಲೋಚನೆ ಮಾಡುತ್ತೇವೆ. ಉದ್ಯೋಗ ಸೃಷ್ಟಿಸುತ್ತೇವೆ. ಇಲ್ಲಿ ನಿರುದ್ಯೋಗ ಇದೆ. ಇಲ್ಲಿನ ಜನ ಬೇರೆ ಕಡೆ ಉದ್ಯೋಗಕ್ಕೆ ಹೋಗುತ್ತಿದ್ದಾರೆ. ಸೌದಿ, ಬೆಂಗಳೂರು, ಮುಂಬೈ ಕಡೆ ಇಲ್ಲಿನವರು ಹೋಗುತ್ತಿದ್ದಾರೆ. ಇಲ್ಲಿ ಎಷ್ಟೇ ಶಿಕ್ಷಣ ಸಂಸ್ಥೆಗಳಿದ್ದರೂ ಮಕ್ಕಳು ಡ್ರಾಪ್ ಔಟ್ ಆಗುತ್ತಿದ್ದಾರೆ. ಇಲ್ಲಿ ಧರ್ಮ ರಾಜಕೀಯ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜಕೀಯದಲ್ಲಿ ಯಾವುದು ಶಾಶ್ವತ ಹಾಗೂ ಅಸಾಧ್ಯ ಇಲ್ಲ. ಹಾಗಾಗಿ ಇಲ್ಲಿ ಬದಲಾವಣೆ ವಿಶ್ವಾಸವಿದೆ. ನಾವು ಗೆಲ್ಲುತ್ತೇವೆ ಎಂದು ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದರು