ಕರಾವಳಿಕ್ರೈಂ

ಸುಳ್ಯ: ಯುವಕನ ಮೇಲೆ ಹಲ್ಲೆ-ಮೂವರ ವಿರುದ್ದ ಪ್ರಕರಣ ದಾಖಲುಸುಳ್ಯ: ಯುವಕನೋರ್ವನ ಮೇಲೆ ಹಲ್ಲೆ ನಡೆದ ಘಟನೆ ಸುಳ್ಯ ತಾಲೂಕು ಕಾಟಿಪಳ್ಳ ಎಂಬಲ್ಲಿ ವರದಿಯಾಗಿದೆ. ಅಮರ ಮುಡ್ನೂರು ಗ್ರಾಮದ ನಿವಾಸಿ ಅಜಿತ್ (21.ವ) ಹಲ್ಲೆಗೊಳಗಾದವರು. 

ಫೆ.13ರಂದು ಸಂಜೆ ಜಯರಾಮ ಎಂಬುವರ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಅಜ್ಜಾವರ-ಸುಳ್ಯ ಮುಖ್ಯ ರಸ್ತೆಯಲ್ಲಿ ಕಾಟಿಪಳ್ಳ ಎಂಬಲ್ಲಿ ತಲುಪಿದಾಗ, ಅಜ್ಜಾವರ ಗ್ರಾಮದ ನಿವಾಸಿಗಳಾದ ದಿನೇಶ್(45), ಪುರುಷೋತ್ತಮ (32) ಹಾಗೂ ಸನತ್ (25) ಎಂಬವರು ಆಟೋರಿಕ್ಷಾವನ್ನು ತಡೆದು ನಿಲ್ಲಿಸಿ, ಅಜಿತ್ ಅವರನ್ನು ಆಟೋರಿಕ್ಷಾದಿಂದ ಹೊರಗೆಳೆದು ಹಲ್ಲೆ ನಡೆಸಿರುವುದಾಗಿದೆ. ಈ ವೇಳೆ ಆಟೋ ಚಾಲಕ ಜಯರಾಮ್ ಅವರು ಮಧ್ಯ ಪ್ರವೇಶಿಸಿ ಹೊಡೆಯುತ್ತಿರುವುದನ್ನು ತಡೆಯಲು ಪ್ರಯತ್ನಿಸಿದಾಗ, ಅವರನ್ನೂ ಬೆದರಿಸಿರುತ್ತಾರೆ. ಬಳಿಕ ಆರೋಪಿಗಳು ಅಜಿತ್ ಅವರಿಗೆ ಜೀವಬೆದರಿಕೆ ಒಡ್ಡಿ ತೆರಳಿರುತ್ತಾರೆ. ಹಲ್ಲೆಯಿಂದ ಅಜಿತ್ ಅವರು ಗಾಯಗೊಂಡಿದ್ದಾರೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!