ಪುತ್ತೂರು: ಬ್ಯಾಂಕ್ ಸಿಬ್ಬಂದಿಯೆಂದು ನಂಬಿಸಿ ಒಟಿಪಿ ಪಡೆದು ಲಕ್ಷಾಂತರ ರೂ. ವಂಚನೆ
ವ್ಯಕ್ತಿಯೋರ್ವರಿಗೆ ಕರೆ ಮಾಡಿ ತಾನು ಬ್ಯಾಂಕ್ ಸಿಬ್ಬಂದಿಯೆಂದು ನಂಬಿಸಿ ಕೆವೈಸಿ ಅಪ್ಡೇಟಿಗೆಂದು ಒಟಿಪಿ ಪಡೆದು ಬಳಿಕ ಆ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ವಂಚಿಸಿದ ಬಗ್ಗೆ ಫೆ 6 ರಂದು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಂದ್ರಶೇಖರ ಭಟ್ (62) ಎಂಬವರೇ ಒಟಿಪಿ ನೀಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ವ್ಯಕ್ತಿ. ಫೆ6ರಂದು ಚಂದ್ರಶೇಖರ ಭಟ್ ಅವರ ಮೊಬೈಲಿಗೆ ಕೆವೈಸಿ ಅಪ್ಡೆಟ್ ಮಾಡುವ ಕುರಿತು ಸಂದೇಶ ಬಂದಿದ್ದು, ಸದ್ರಿ ಸಂದೇಶದಲ್ಲಿ ತಿಳಿಸಿದ ದೂರವಾಣಿ ಸಂಖ್ಯೆಗೆ ಅವರು ಕರೆ ಮಾಡಿದಾಗ ನಿಮ್ಮ ಖಾತೆ ಬ್ಲಾಕ್ ಆಗಿದೆ. ಒಟಿಪಿ ನೀಡುವಂತೆ ತಿಳಿಸಿದ ಮೇರೆಗೆ ಅವರು ಒಟಿಪಿ ನೀಡಿದ್ದಾರೆ. ಇದಾದ ಸ್ವಲ್ಪ ಹೊತ್ತಿನಲ್ಲೇ ಅವರ ಬ್ಯಾಂಕ್ ಖಾತೆಯಿಂದ 1.73 ಲಕ್ಷ ರೂಪಾಯಿ ಹಣ ಕಡಿತಗೊಂಡಿದೆ.
ಈ ಬಗ್ಗೆ ಬ್ಯಾಂಕ್ ಸಿಬ್ಬಂದಿಯೆಂದು ನಂಬಿಸಿ ವಂಚಿಸಿದ ಅಪರಿಚಿತ ವ್ಯಕ್ತಿಯ ವಿರುದ್ದ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.