ಕರಾವಳಿ

ಪ್ರೀತಿಸಿ ಕೈಕೊಟ್ಟ ಯುವಕನ ಮನೆಯ ಮುಂದೆ ಧರಣಿ ಕುಳಿತ ಯುವತಿ..!

ವಿಟ್ಲ: ಯುವಕನೋರ್ವನ ಮನೆ ಮಂದೆ ಯುವತಿಯೋರ್ವಳು ಧರಣಿ ಕುಳಿತ ಘಟನೆ ವಿಟ್ಲ ಸಮೀಪದ ಅಡ್ಯನಡ್ಕದಲ್ಲಿ ಫೆ.6 ರಂದು ನಡೆದಿದೆ. ಯುವಕ ಮತ್ತು ನಾನು ಪರಸ್ಪರ ಪ್ರೀತಿಸುತ್ತಿದ್ದು ಇದೀಗ ಆತ ನನ್ನಿಂದ ಹಣ ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಿ ಯುವತಿ ಮನೆಯೆದುರು ಧರಣಿ ನಡೆಸುವುದಾಗಿ ತಿಳಿದು ಬಂದಿದೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಯುವತಿಯನ್ನು ಮನವೊಲಿಸಲು ಪ್ರಯತ್ನ ಪತ್ತಿದ್ದು ಕೊನೆಗೆ ಆಕೆಯನ್ನು ರಾತ್ರಿ ವೇಳೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿರುವುದಾಗಿ ವರದಿಯಾಗಿದೆ.


ಬೆಂಗಳೂರಿನ ಸಂಸ್ಥೆಯೊಂದರ ಯುವತಿ ಉತ್ತರ ಭಾರತದ ಪಂಜಾಬ್ ನವರು ಎನ್ನಲಾಗಿದ್ದು ಈಕೆಗೆ ಅಡ್ಯನಡ್ಕದ ಯುವಕನೋರ್ವನ ಪರಿಚಯವಾಗಿದ್ದು, ನಂತರದ ದಿನಗಳಲ್ಲಿ ಪ್ರೀತಿಗೆ ತಿರುಗಿದೆ. ಯುವಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ನಂತರ ಇವರ ಮಧ್ಯೆ ಹಣಕಾಸಿನ ವ್ಯವಹಾರ ನಡೆದಿದೆ ಎನ್ನಲಾಗಿದೆ.


ಹೀಗಾಗಿ ಅಡ್ಯನಡ್ಕ ಮನೆಗೆ ಯುವತಿ ಬಂದಿದ್ದು, ಪ್ರೀತಿಯ ನಾಟಕವಾಡಿ ಯುವಕ ಹಣ ಪಡೆದಿದ್ದಾನೆ, ಈಗ ಹಣ ವಾಪಸ್ಸು ನೀಡದೆ ವಿವಾಹ ಕೂಡಾ ಆಗದೇ ವಂಚಿಸಿದ್ದಾನೆ ಎಂದು ಆರೋಪಿಸಿ ಯುವಕನ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾಳೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!