SKSSF ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ಯುನಿಟ್‌ನ ವರ್ಕಿಂಗ್ ಕಾರ್ಯದರ್ಶಿಯಾಗಿ ರಶೀದ್ ಅಮ್ಚಿನಡ್ಕ
ಪುತ್ತೂರು: ಎಸ್ಕೆಎಸ್ಸೆಸ್ಸೆಫ್ ಬೆಂಗಳೂರು ಚಾಪ್ಟರ್, ಎಲೆಕ್ಟ್ರಾನಿಕ್ ಸಿಟಿ ಯುನಿಟ್ ಇದರ ವರ್ಕಿಂಗ್ ಕಾರ್ಯದರ್ಶಿಯಾಗಿ ರಶೀದ್ ಅಮ್ಚಿನಡ್ಕ ಆಯ್ಕೆಯಾಗಿದ್ದಾರೆ.
ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡದಲ್ಲಿ ಗುರುತಿಸಿಕೊಂಡಿದ್ದ ರಶೀದ್ ಅಮ್ಚಿನಡ್ಕ ಅವರು ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ಮಡಿಕೇರಿಯಲ್ಲಿ ಪ್ರವಾಹ ಬಂದ ಸಂದರ್ಭ ತನ್ನ ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿ ಸುದ್ದಿಯಾಗಿದ್ದ ರಶೀದ್ ಅಮ್ಚಿನಡ್ಕ ಅವರು ಸ್ಥಳೀಯವಾಗಿ ಸಾಮಾಜಿಕವಾಗಿ ತೊಡಗಿಸಿಕೊಡಿದ್ದರು. ಇವರು ಸ್ಥಳೀಯವಾಗಿ ‘ಆಪತ್ಭಾಂಧವ ರಶೀದ್’ ಎಂದೇ ಚಿರಪರಿಚಿತರಾಗಿದ್ದಾರೆ.