ಕರಾವಳಿರಾಜಕೀಯ

ಪುತ್ತಿಲ ಬಿಜೆಪಿಗೆ ಬರಬಹುದು, ಆದರೆ… ಷರತ್ತು ವಿಧಿಸಿದ ಸಂಜೀವ ಮಠಂದೂರು

ಪುತ್ತೂರು: ವಿಧಾನಸಭಾ ಚುನಾವಣೆಯಲ್ಲಿ ಪುತ್ತಿಲ ಪರಿವಾರದಿಂದ ಸ್ಪರ್ಧಿಸಿ ಹೆಚ್ಚಿನ ಮತ ಪಡೆಯುವಲ್ಲಿ ಯಶಸ್ವಿಯಾಗಿದ್ದ ಅರುಣ್‌ ಕುಮಾರ್‌ ಪುತ್ತಿಲ ಬಿಜೆಪಿ ಸೇರುವ ವಿಚಾರದಲ್ಲಿ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಮಾಜಿ ಶಾಸಕ ಸಂಜೀವ ಮಠಂದೂರು ಪುತ್ತಿಲ ಸೇರ್ಪಡೆಗೆ ಬಹಿರಂಗವಾಗಿ ಷರತ್ತು ವಿಧಿಸಿದ್ದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.


ವೀಡಿಯೊವೊಂದರಲ್ಲಿ ಮಾತನಾಡಿರುವ ಸಂಜೀವ ಮಠಂದೂರು, ಪುತ್ತಿಲ ಬಿಜೆಪಿಗೆ ಬರುವುದಕ್ಕೆ ಸ್ವಾಗತ. ಆದರೆ ಪಕ್ಷ ಸೇರ್ಪಡೆಗೆ ಮೊದಲು ಅವರು ತಮ್ಮ ಸಂಘಟನೆಯನ್ನು ವಿಸರ್ಜಿಸಬೇಕು, ಮತ್ತು ಯಾವುದೇ ಹುದ್ದೆ ಬಯಸದೆ ಬರಬೇಕು. ಹಿರಿಯರಿಗೆ ನೋವುಂಟು ಮಾಡುವ ರೀತಿಯಲ್ಲಿ ಭಾಷಣಗಳಲ್ಲಿ ಮತ್ತು ಇತರ ಸಂದರ್ಭಗಳಲ್ಲಿ ಅವರು ಆಡಿರುವ ಮಾತುಗಳಿಗೆ ವಿಷಾದ ವ್ಯಕ್ತಪಡಿಸಬೇಕು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!