ಅಂತಾರಾಷ್ಟ್ರೀಯಜಿಲ್ಲೆ

ತಾಯಿಫ್ ಫೈಟರ್ಸ್ ಹೆಲ್ಪ್ ಲೈನ್:
ನೂತನ ಪದಾಧಿಕಾರಿಗಳ ಆಯ್ಕೆ
ತಾಯಿಫ್ ಫೈಟರ್ಸ್ ಹೆಲ್ಪ್ ಲೈನ್ ಸಂಘಟನೆಯ ವಾರ್ಷಿಕ ಮಹಾಸಭೆ ಜ.18ರಂದು ಸಲಾಮದ ಕಾಸರಗೋಡು ನಿವಾಸದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಅನಸ್ ಕುದ್ಲೂರು ಅಧ್ಯಕ್ಷತೆ ವಹಿಸಿದ್ದರು.

ಕೋಶಾಧಿಕಾರಿ ಅಬ್ದುಲ್ ರಝಾಕ್ ಕೊಡಂಗಾಯಿ ದುಆ ನೆರವೇರಿಸಿ, ಸ್ವಾಗತಿಸಿ ಮಾತನಾಡಿ ಈ ಸಂಘಟನೆಯ ಸದಸ್ಯರು ರಾಜ್ಯ, ಭಾಷೆ, ವೈಯಕ್ತಿಕ ವಿಚಾರಗಳನ್ನು ಮರೆತು ಸಹೋದರರಂತೆ ಆತ್ಮಾರ್ಥವಾಗಿ ಸಹಕಾರ ನೀಡುತ್ತಾ ಬಂದಿರುವುದರಿಂದ ಹಲವಾರು ಯಶಸ್ವಿ ಸಾಧನೆಗಳನ್ನು ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು.

ಉದ್ಘಾಟಿಸಿದ ಮಾಜಿ ಅಧ್ಯಕ್ಷ ಸಲೀಂ ಪಲ್ಲಕುಡಲ್ ಮಾತನಾಡಿ ಹತ್ತು ಹಲವು ಊರಿನ ವಿಭಿನ್ನ ಭಾಷೆಗಳ, ವಿಭಿನ್ನ ಸಂಘಟನೆಗಳ ಪರವಾಗಿರುವ ಜನರಿದ್ದರೂ ಅದೆಲ್ಲವನ್ನೂ ಮರೆತು ಸಂಘಟನೆಯ ಧ್ಯೇಯವನ್ನೇ ಪ್ರಧಾನವಾಗಿರಿಸಿಕೊಂಡು ಮುನ್ನಡೆಯುತ್ತ ಬಂದಿರುವುದನ್ನು ಶ್ಲಾಘಿಸಿದರು.

ಪ್ರಧಾನ ಕಾರ್ಯದರ್ಶಿ ಫವಾಝ್ ಬಾಯಾರ್ ವಾರ್ಷಿಕ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದ್ದನ್ನು ಸರ್ವ ಸದಸ್ಯರು ಸರ್ವಾನುಮತದಿಂದ ಅಂಗೀಕಾರ ಮಾಡಲಾಯಿತು.

ನಂತರ ಹೊಸ ಸಮಿತಿಯನ್ನು ರಚಿಸಲಾಯಿತು. ಮತ್ತು ಹಲವು ತೀರ್ಮಾನ ಕೈಗೊಳ್ಳಲಾಯಿತು

2024-25 ಸಾಲಿನ ನೂತನ ಪದಾಧಿಕಾರಿಗಳು: ಅಧ್ಯಕ್ಷರು: ರಶೀದ್ ವಲಚ್ಚಿಲ್, ಪ್ರಧಾನ ಕಾರ್ಯದರ್ಶಿ: ಹಫೀಝ್ ಅಡ್ಡೂರು, ಕೋಶಾಧಿಕಾರಿ: ರಿಯಾಝ್ ಉಳ್ಳಾಲ, ಉಪಾಧ್ಯಕ್ಷರುಗಳು: ದಾವೂದ್ ಗುರುಪುರ, ಮಲಿಕ್ ಇಡ್ಯಾ, ಜೊತೆ ಕಾರ್ಯದರ್ಶಿಗಳು:
ಅಲ್ತಾಫ್ ಗುರುಪುರ, ಹಸೈನಾರ್ ಕೊಡಂಗಾಯಿ, ಮೀಡಿಯಾ ಚೇರ್ಮಾನ್ ಖಾದರ್ ಕೊಡಂಗಾಯಿ

ಕನ್ವೀನರ್ ಗಳು: ಸಲೀಂ ಪಲ್ಲಕುಡಲ್,ಅಬ್ದುಲ್ ರಝಾಕ್ ಕೊಡಂಗಾಯಿ, ಕಾರ್ಯಕಾರಿ ಸಮಿತಿ ಸದಸ್ಯರು:
ಫವಾಝ್ ಬಾಯರ್, ಅನಸ್ ಉಪ್ಪಿನಂಗಡಿ, ಅಝ್ವೀರ್ ಗಾಣೆಮಾರ್, ಸಿದ್ದೀಕ್ ಚಿಪ್ಪಾರ್, ಅಶ್ರಫ್ ಅಡ್ಕ ಆಯ್ಕೆಯಾದರು. ರಿಯಾಝ್ ಉಳ್ಳಾಲ ವಂದಿಸಿದರು.‌

Leave a Reply

Your email address will not be published. Required fields are marked *

error: Content is protected !!