ನಗರಸಭಾ ಚುನಾವಣಾ ಫಲಿತಾಂಶ: ಅಭಿವೃದ್ಧಿಗೆ ಸಂದ ಜಯ-ಶರೀಫ್ ಬಲ್ನಾಡ್
ಪುತ್ತೂರು: ಪುತ್ತೂರು ನಗರಸಭೆಯ ಎರಡು ವಾರ್ಡ್ ಗಳಿಗೆ ನಡೆದ ಚುನಾವಣಾ ಫಲಿತಾಂಶವು ಶಾಸಕ ಅಶೋಕ್ ರೈ ಯ ಅಭಿವೃದ್ಧಿ ಹಾಗೂ ಸಿದ್ಧರಾಮಯ್ಯ ನೇತೃತ್ವದ ಜನಪರ ಆಡಳಿತಕ್ಕೆ ಸಂದ ಜಯವಾಗಿದೆ ಎಂದು ಯಂಗ್ ಬ್ರಿಗೇಡ್ ಪುತ್ತೂರು ತಾಲೂಕು ಅಧ್ಯಕ್ಷ ಶರೀಫ್ ಬಲ್ನಾಡ್ ತಿಳಿಸಿದ್ದಾರೆ.
ಒಂದು ವಾರ್ಡ್ ನಲ್ಲಿ ಪ್ರಚಂಡ ಜಯ ಹಾಗೂ ನೆಲ್ಲಿಕಟ್ಟೆ ವಾರ್ಡ್ ನಲ್ಲಿ ಪ್ರಬಲ ಪೈಪೋಟಿ ನೀಡಲು ನಾವು ಯಶಸ್ವಿಯಾಗಿದ್ದೇವೆ. ಗೆದ್ದ ಅಭ್ಯರ್ಥಿಗೂ, ಪ್ರಬಲ ಪೈಪೋಟಿ ನೀಡಿ ಸೋಲುಂಡ ಅಭ್ಯರ್ಥಿಗೂ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.