ಕರಾವಳಿಕ್ರೈಂ

ಕಾಣಿಯೂರು: ರಿಕ್ಷಾ ಚಾಲಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ



ಪುತ್ತೂರು: ಕಾಣಿಯೂರಿನ ಎಲುವೆ ಎಂಬಲ್ಲಿ ರಿಕ್ಷಾ ಚಾಲಕರೋರ್ವರ ಶವ ನೇಣು ಬಿಗಿದ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕಾಣಿಯೂರಿನ ಬೆದ್ರಾಜೆ ಮನೆ ವಸಂತ (42) ಅವರ ರಿಕ್ಷಾ ಕಾಣಿಯೂರು ರಸ್ತೆಯ ಎಲುವೆ ಎಂಬಲ್ಲಿ ನಿಲ್ಲಿಸಿತ್ತು. ಅಲ್ಲೇ ಸಮೀಪದ ಕಾಡಿನಲ್ಲಿ ವಸಂತ ಮರಕ್ಕೆ ನೈಲಾನ್‌ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ವಸಂತ ಅವರ ಸಹೋದರ ಗಣೇಶ್‌ ಅವರು ಮರಣದಲ್ಲಿ ಸಂಶಯವಿದ್ದು, ತನಿಖೆ ನಡೆಸುವಂತೆ ಬೆಳ್ಳಾರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!