ಪ್ರತಿಭಟನೆ ಹೆಸರಲ್ಲಿ ಕಾನೂನು ಕೈಗೆತ್ತಿಕೊಳ್ಳುವುದನ್ನು ಸಹಿಸುವುದಿಲ್ಲ- ಡಾ.ಜಿ. ಪರಮೇಶ್ವರ್ ಎಚ್ಚರಿಕೆ
ಕನ್ನಡದ ಪರವಾಗಿ ಎಲ್ಲ ರೀತಿಯ ತೀರ್ಮಾನಗಳನ್ನು ತೆಗೆದುಕೊಳ್ಳುವ ಕೆಲಸವನ್ನು ನಮ್ಮ ಸರಕಾರ ಹಿಂದೆಯೂ ಮಾಡಿದೆ, ಅದಕ್ಕೆ ಈಗಲೂ ಬದ್ಧವಾಗಿದೆ. ಪ್ರತಿಭಟನೆ ಹೆಸರಲ್ಲಿ ಕಾನೂನು ಕೈಗೆತ್ತಿಕೊಳ್ಳುವುದನ್ನು ಸಹಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮದವರ ಜತೆ ಮಾತನಾಡಿದ ಅವರು, ಯಾವುದೇ ರೀತಿಯ ಸಮಸ್ಯೆಗಳಿದ್ದರೆ ಸರಕಾರಕ್ಕೆ ಒತ್ತಾಯಿಸಲಿ. ಪ್ರತಿಭಟನೆ ಹೆಸರಲ್ಲಿ ಅಂಗಡಿ, ಶಾಪಿಂಗ್ ಮಾಲ್ ಗಳ ಮೇಲೆ ದಾಳಿ ಮಾಡಿ, ಸಾರ್ವಜನಿಕರ ಆಸ್ತಿ ಹಾನಿ ಮಾಡುವುದು ಸರಿಯಲ್ಲ ಈ ಬಗ್ಗೆ ಸರ್ಕಾರ ಅಥವಾ ಬಿಬಿಎಂಪಿಯವರಿಗೆ ಒತ್ತಾಯಿಸಬೇಕಿತ್ತು. ಕಾನೂನು ಕೈಗೆತ್ತಿಕೊಳ್ಳಬೇಕಿರಲಿಲ್ಲ ಎಂದು ಹೇಳಿದರು. ಹೊರರಾಜ್ಯ, ಹೊರದೇಶದಿಂದ ಬೆಂಗಳೂರು ನಗರಕ್ಕೆ ಬರುವ ಜನರಿಗೆ ಇದರಿಂದ ಯಾವ ಸಂದೇಶ ಹೋಗುತ್ತದೆ? ಪೊಲೀಸರು ಕಾನೂನು ಪ್ರಕಾರ ಕ್ರಮ ಜರುಗಿಸಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.