ಕರಾವಳಿ

ಈಶ್ವರಮಂಗಲ: ವಿದ್ಯಾರ್ಥಿ ವಿರುದ್ದ ವಿದ್ಯಾರ್ಥಿಗಳ ಪೋಷಕರಿಂದ ಪ್ರತಿಭಟನೆ



ಪುತ್ತೂರು: ಶಾಲಾ ವಿದ್ಯಾರ್ಥಿಯೋರ್ವನ ವಿರುದ್ದ ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ನಡೆಸಿದ ಅಪರೂಪದ ಘಟನೆ ಈಶ್ವರಮಂಗಲ ಸಮೀಪದ ಮೇನಾಲ ಸರಕಾರಿ ಹಿ. ಪ್ರಾಥಮಿಕ ಶಾಲೆಯಲ್ಲಿ ಡಿ. 11ರಂದು ನಡೆದಿದೆ.

ಮೇನಾಲ ಹಿರಿಯ ಮ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬನ ವಿರುದ್ದ ಮಕ್ಕಳ ಪೋಷಕರು ಒಂದಾಗಿ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದು ವಿದ್ಯಾರ್ಥಿಯ ಕೀಟಲೆ, ಪೋಕರಿತನದಿಂದ ಶಾಲೆಯಲ್ಲಿ ಇತರ ಮಕ್ಕಳಿಗೆ ನೆಮ್ಮದಿ ಇಲ್ಲದಂತಾಗಿದೆ. ಈ ವಿದ್ಯಾರ್ಥಿ ನಿಷೇಧಿತ ವಸ್ತುಗಳನ್ನು ಸೇವಿಸಿ ಶಾಲೆಗೆ ಬಂದು ಇತರ ವಿದ್ಯಾರ್ಥಿಗಳಿಗೆ ತೊಂದರೆ ಕೊಡುತ್ತಿರುವುದಾಗಿ ಮಕ್ಕಳ ಪೋಷಕರು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.

ಶಾಲೆಯಲ್ಲಿ 123 ವಿದ್ಯಾರ್ಥಿಗಳಿದ್ದು ಬಹುತೇಕ ವಿದ್ಯಾರ್ಥಿಗಳ ಹೆತ್ತವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ಕೀಟಲೆ ನೀಡುವ ವಿದ್ಯಾರ್ಥಿಯನ್ನು ಡಿಬಾರ್‌ ಮಾಡುವಂತೆ ಆಗ್ರಹಿಸಿದ್ದಾರೆ. ಇಲ್ಲದಿದ್ದಲ್ಲಿ ತಮ್ಮ ಮಕ್ಕಳನ್ನು ಶಾಲೆಯಿಂದ ಕರೆದೊಯ್ಯುವುದಾಗಿ ಹೇಳಿದ ಪ್ರತಿಭಟನಾ ನಿರತ ಪೋಷಕರು ಶಿಕ್ಷಣಾಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಿವಂತೆ ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!