ರಾಜ್ಯ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಳೆ ಹುಡುಗಿ ಪೂಜಾ ಗಾಂಧಿ

ಬೆಂಗಳೂರು: ಕನ್ನಡ ಚಿತ್ರರಂಗದ ಮಳೆ ಹುಡುಗಿ ಖ್ಯಾತಿಯ ನಟಿ ಪೂಜಾ ಗಾಂಧಿ ಅವರು ತಮ್ಮ ಬಹುದಿನಕಾಲದ ಗೆಳೆಯ, ಉದ್ಯಮಿ ವಿಜಯ್ ಘೋರ್ಪಡೆ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.


ಬೆಂಗಳೂರಿನ ಯಲಹಂಕ ಸಮೀಪ ಇರುವ ಆರಂಭ ರೆಸ್ಟೋರೆಂಟ್‌ನಲ್ಲಿ ಪೂಜಾ- ವಿಜಯ್ ಮದುವೆ ನೆರವೇರಿದೆ. ಉದ್ಯಮಿ ವಿಜಯ್ ಘೋರ್ಪಡೆ ಎನ್ನುವವರ ಜೊತೆ ಪೂಜಾ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.

ಪೂಜಾ ಗಾಂಧಿ – ವಿಜಯ್ ಮದುವೆಗೆ ಕುಟುಂಬಸ್ಥರು, ಆಪ್ತರು ಸ್ಯಾಂಡಲ್‌ವುಡ್‌ ನ ಆತ್ಮೀಯ ಸ್ನೇಹಿತರಷ್ಟೇ ಪಾಲ್ಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!