ಕರಾವಳಿ

ಅಂಬೇಡ್ಕರ್ ರಕ್ಷಣಾ ವೇದಿಕೆ ಅರಂತೋಡು ಘಟಕದ ಸಭೆ

ಸುಳ್ಯ: ಅಂಬೇಡ್ಕರ್ ರಕ್ಷಣಾ ವೇದಿಕೆಯ ಅರಂತೋಡು ಘಟಕದ ಮಾಸಿಕ ಸಭೆ ನ.12ರಂದು ಶ್ರೀ ಹರಿ ಕಾಂಪ್ಲೆಕ್ಸ್ ಅಡ್ತಲೆ ಅರ್ಜಿ ಕಜೆ ಅಂಬೇಡ್ಕರ್ ರಕ್ಷಣಾ ವೇದಿಕೆಯ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಅಂಬೇಡ್ಕರ್ ರಕ್ಷಣೆ ವೇದಿಕೆಯ ಅರಂತೋಡ ಘಟಕದ ಅಧ್ಯಕ್ಷರಾದ ನವೀನ ಕಲ್ಲುಗುಡ್ಡೆ ವಹಿಸಿದ್ದರು.

ವೇದಿಕೆಯಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ. ಘಟಕದ ಕಾರ್ಯದರ್ಶಿ ರಾಮಕೃಷ್ಣ ಅರಮನೆಗಯ ಸುಳ್ಯ ತಾಲೂಕು ಕಾರ್ಯದರ್ಶಿ ತೇಜಕುಮಾರ್ ಅರಮನೆಗಯ, ಮಹಿಳಾ ಘಟಕದ ಅಧ್ಯಕ್ಷೆ ಸೀತಮ್ಮ ಕುಂಪುಲಿ, ಮಹಿಳಾ ಕಾರ್ಯದರ್ಶಿ ಸುಮತಿ ಅರಮನೆಗಯ ಉಪಸ್ಥಿತರಿದ್ದರು.

ನಂತರ ಸಭೆಯನ್ನುದ್ದೇಶಿಸಿ ಅರಂತೋಡು ಘಟಕದ ಅಧ್ಯಕ್ಷರಾದ ನವೀನ ಕಲ್ಲುಗುಡ್ಡೆ ಮತ್ತು ಕಾರ್ಯದರ್ಶಿಯಾದ ರಾಮಕೃಷ್ಣ ಅರಮನೆಗಯ ಮಾತನಾಡಿದರು.

ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ಮಾತನಾಡಿ ಈಗಾಗಲೇ ಕನ್ನಡ ಶಾಲೆ ಉಳಿಸುವ ನಿಟ್ಟಿನಲ್ಲಿ ಸುಮಾರು ಎಂಟು ಶಾಲೆಗಳಲ್ಲಿ ಶ್ರಮದಾನವನ್ನು ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಮಾಡಿದ್ದೇವೆ ಇದರಲ್ಲಿ ಅರಂತೋಡು ಘಟಕದವರು 7 ಶಾಲೆಯ ಶ್ರಮದಾನ ಮಾಡಿದ್ದಾರೆ, ನಾಗಪಟ್ಟಣ ಘಟಕದವರು 1 ಶಾಲೆಯಲ್ಲಿ ಶ್ರಮದಾನ ಮಾಡಿದ್ದಾರೆ, ಇನ್ನು ಮುಂದೆ ಕೂಡ ಆದಷ್ಟು ಶಾಲೆಗಳ ಶ್ರಮದಾನವನ್ನು ಮಾಡಲು ನಮ್ಮ ಅಂಬೇಡ್ಕರ್ ರಕ್ಷಣಾ ವೇದಿಕೆ ಯಾವಾಗಲೂ ಸಿದ್ಧವಾಗಿರುತ್ತದೆ ಎಂದು ಹೇಳಿದರು.

ನಂತರ ಶ್ರಮದಾನ ಮಾಡಲು ಸದಸ್ಯರಿಗೆ ಅಂಬೇಡ್ಕರ್ ರಕ್ಷಣೆ ವೇದಿಕೆಯ ಹೆಸರನ್ನು ಬರೆದ ಟೀ ಶರ್ಟ್ ನ್ನು ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆಯವರು ವಿತರಿಸಿದರು. ತೇಜಕುಮಾರ್ ಅರಮನೆಗಯ ಸ್ವಾಗತಿಸಿ ಕಿಟ್ಟು ಅರಮನೆಗಯ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!