ಕರಾವಳಿ

ಸುಳ್ಯ: ಬೆಳ್ಳಂಬೆಳಗ್ಗೆ ನಡು ರಸ್ತೆಯಲ್ಲಿ ಗಜರಾಜನ ಸವಾರಿ: ಬೆಚ್ಚಿ ಬಿದ್ದ ಬೈಕ್ ಸವಾರರು

ಸುಳ್ಯ: ಮಂಡೆಕೋಲು ದೇಲಂಪಾಡಿ ಗ್ರಾಮದ ಬೆಳ್ಳಿಪಾಡಿ ಪರಿಸರದಲ್ಲಿ ಇತ್ತೀಚಿನ ಕೆಲವು ದಿನಗಳಿಂದ ನಿರಂತರವಾಗಿ ಕಾಡಾನೆಗಳು ಕೃಷಿಕರ ತೋಟಗಳಿಗೆ ಹಾನಿ ಮಾಡುತ್ತಿದ್ದು, ನ.10ರಂದು ಬೆಳಿಗ್ಗೆ ಕಾಡಾನೆಯೊಂದು ಪಂಜಿಕಲ್ಲಿನ ಬಳಿ ಮುಖ್ಯರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಬಂದಿದ್ದು, ಈ ರಸ್ತೆಯಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನ ಸವಾರರು ಭಯಭೀತರಾಗಿ ಓಡಿದ ಘಟನೆ ವರದಿಯಾಗಿದೆ.

ಈ ದೃಶ್ಯವನ್ನು ಮೊಬೈಲ್ ಮೂಲಕ ವೀಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಜಾಲ್ಸೂರು – ಕಾಸರಗೋಡು ಅಂತರರಾಜ್ಯ ರಸ್ತೆಯ ಪಂಜಿಕಲ್ಲಿನಲ್ಲಿ ಆನೆ ನಡೆದುಕೊಂಡು ಬರುತ್ತಿದ್ದ ವೇಳೆ ಈ ರಸ್ತೆಯಾಗಿ ಬಂದ ಬೈಕ್ ಸವಾರರು ಹಾಗೂ ಸಹ ಸವಾರರು ಭಯ ಭೀತರಾದ ದೃಶ್ಯ ವಿಡಿಯೋದಲ್ಲಿ ಕಂಡುಬರುತ್ತಿದೆ.

Leave a Reply

Your email address will not be published. Required fields are marked *

error: Content is protected !!