ಕರಾವಳಿ

ಅ.30 ಮತ್ತು 31ರಂದು ಕುಂಬ್ರ ವರ್ತಕರ ಸಂಘದ ಆಶ್ರಯದಲ್ಲಿ  ಬೃಹತ್ ಆಧಾರ್ ನೊಂದಾವಣೆ ಹಾಗೂ ತಿದ್ದುಪಡಿ ಶಿಬಿರಪುತ್ತೂರು: ವರ್ತಕರ ಸಂಘ ಕುಂಬ್ರ ಇದರ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ಇದರ  ಸಹಯೋಗದೊಂದಿಗೆ ಬೃಹತ್ ಆಧಾರ್ ನೊಂದಾವಣೆ ಹಾಗೂ ತಿದ್ದುಪಡಿ ಶಿಬಿರ ಅ.30 ಮತ್ತು 31ರಂದು ಬೆಳಿಗ್ಗೆ ಗಂಟೆ  9-30ರಿಂದ ಸಂಜೆ ಗಂಟೆ 5-00ರ ವರೆಗೆ ಕುಂಬ್ರ ಅಕ್ಷಯ ಆರ್ಕೇಡ್‌ನಲ್ಲಿ ನಡೆಯಲಿದೆ.

ಅ.30ರಂದು ನಡೆಯುವ ಉದ್ಘಾಟನಾ ಸಮಾರಂಭದ  ಅಧ್ಯಕ್ಷತೆಯನ್ನು ಕುಂಬ್ರ ವರ್ತಕರ ಸಂಘದ ಅಧ್ಯಕ್ಷ  ರಫೀಕ್ ಅಲ್‌ರಾಯಾ ವಹಿಸಲಿದ್ದು ಪತ್ರಕರ್ತ  ಸಿಶೇ ಕಜೆಮಾರ್ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಪುತ್ತೂರು ವಿಭಾಗದ  ಹಿರಿಯ ಅಂಚೆ ಅಧೀಕ್ಷಕರಾದ ನವೀನ್ ಚಂದರ ಹಾಗೂ  ಸಹಾಯಕ ಅಂಚೆ ಅಧೀಕ್ಷಕರಾದ ಎ ಗಣಪತಿ ಮರಾಡಿ  ಅವರು ಮಾಹಿತಿ ನೀಡಲಿದ್ದಾರೆ. ಹಲವು ಗಣ್ಯರು  ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅ.31ರಂದು ಸಂಜೆ  ಸಮಾರೋಪ ಸಮಾರಂಭ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!