ಬೆಂಗಳೂರು: ಆಂಟಿ ಎಂದು ಕರೆದಿದ್ದಕ್ಕೆ ಆಕ್ರೋಶಗೊಂಡು ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಮಹಿಳೆ
ಬೆಂಗಳೂರು: ಮಹಿಳೆಯೊಬ್ಬರನ್ನು ಆಂಟಿ ಎಂದು ಕರೆದಿದ್ದಕ್ಕೆ ಆಕ್ರೋಶಗೊಂಡು ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಘಟನೆ ಬೆಂಗಳೂರು ಬೆಂಗಳೂರಿನಲ್ಲಿ ವರದಿಯಾಗಿದೆ. ಹಲ್ಲೆಗೊಳಗಾದ ವ್ಯಕ್ತಿ ಪೊಲೀಸ್ ದೂರು ನೀಡಿದ್ದಾರೆ.
ಮಲ್ಲೇಶ್ವರಂ ಠಾಣಾ ವ್ಯಾಪ್ತಿಯಲ್ಲಿನ ಎಟಿಎಂ ಘಟಕಕ್ಕೆ ಹಣ ತುಂಬಲು ಸಿಬ್ಬಂದಿಗಳು ಬಂದಿದ್ದರು. ಈ ವೇಳೆ ಎಟಿಎಂ ದ್ವಾರದ ಮುಂಬಾಗ ಮಹಿಳೆಯೊಬ್ಬರು ನಿಂತಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ‘ಆಂಟಿ ಸ್ವಲ್ಪ ಪಕ್ಕಕ್ಕೆ ಸರಿದು ನಿಲ್ಲಿ’ ಎಂದು ಹೇಳಿದ್ದಾರೆ.
ತನ್ನನ್ನು ಆಂಟಿ ಎಂದು ಕರೆದಿದ್ದಕ್ಕೆ ಆಕ್ರೋಶಗೊಂಡ ಮಹಿಳೆ ಭದ್ರತಾ ಸಿಬ್ಬಂದಿಯೊಂದಿಗೆ ಜಗಳ ಆರಂಭಿಸಿ ಕಪಾಳಕ್ಕೆ ಹೊಡೆದು, ಜೀವಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಹಲ್ಲೆಗೊಳಗಾದ ಎಟಿಎಂ ಭದ್ರತಾ ಸಿಬ್ಬಂದಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.