ಬ್ರಿಟನ್’ನಲ್ಲಿ ಸಿಗರೇಟ್ ನಿಷೇಧ..?
ಬ್ರಿಟನ್’ನಲ್ಲಿ ಸಿಗರೇಟ್ ನಿಷೇಧಿಸಲು ಪ್ರಧಾನಿ ರಿಷಿ ಸುನಕ್ ಚಿಂತನೆ ನಡೆಸಿದ್ದಾರೆ ಎಂದು ವರದಿಯಾಗಿದೆ 2009ರ ಜನವರಿ 1ರಂದು ಅಥವಾ ನಂತರ ಜನಿಸಿರುವವರಿಗೆ ತಂಬಾಕು ಮಾರಾಟ ಮಾಡುವುದನ್ನು ನಿಷೇಧಿಸುವುದು ಸೇರಿದಂತೆ ಹಲವು ಧೂಮಪಾನ ವಿರೋಧಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ.
ದೂಮಪಾನ ತ್ಯಜಿಸುವುದು ಹಾಗೂ 2030ರ ವೇಳೆಗೆ ಯುವಕರನ್ನು ಧೂಮಪಾನ ಮುಕ್ತರನ್ನಾಗಿ ಮಾಡಲು ಬಯಸುತ್ತೇನೆ, ಅದಕ್ಕಾಗಿ ನಾವು ಈಗಾಗಲೇ ಸಿಗರೇಟ್ ಉತ್ಪಾದನಾ ಪ್ರಮಾಣವನ್ನು ಕಡಿಮೆ ಮಾಡಲು ಕ್ರಮಗಳನ್ನು ಕೈಗೊಂಡಿದ್ದೇವೆ. ಗರ್ಭಿಣಿಯರು ಸಿಗರೇಟ್ ತ್ಯಜಿಸಲು ಪ್ರೋತ್ಸಾಹಿಸುವ ವೋಚರ್ ಯೋಜನೆಯಂತಹ ಹಲವು ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ರಿಷಿ ಸುನಕ್ ಹೇಳಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಬ್ರಿಟನ್ ನಲ್ಲಿ ಸಿಗರೇಟ್ ಸಂಪೂರ್ಣ ನಿಷೇಧ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.