ಸುಳ್ಯ: ಅಸೌಖ್ಯದಿಂದ 1ನೇ ತರಗತಿ ವಿದ್ಯಾರ್ಥಿ ಮೃತ್ಯು
ಸುಳ್ಯ: ಅಸೌಖ್ಯದಿಂದ ಶಾಲಾ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದಿಂದ ಸೆ.5 ರಂದು ವರದಿಯಾಗಿದೆ.
ದೇವಚಳ್ಳ ಗ್ರಾಮದ ತಳೂರು ನಿವಾಸಿ ಚಂದ್ರಶೇಖರ ಎಂಬವರ ಪುತ್ರ ದೇವಚಳ್ಳ ಸರಕಾರಿ ಹಿ. ಪ್ರಾ ಶಾಲೆಯ 1 ನೇ ತರಗತಿಯ ವಿಲಾಸ್ ಟಿ. ಮೃತಪಟ್ಟ ಬಾಲಕ. ತೀವ್ರ ಹೊಟ್ಟೆನೋವು ಇದೆಯೆಂದು ಹೇಳಿದ ಬಾಲಕನನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಎ. ಜೆ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತ ವಿಲಾಸ್ ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.