ಎಲ್ ಕೆ ಜಿ ತರಗತಿಯಂದ್ರೆ ಎಬಿಸಿಡಿ ಮಾತ್ರ ಕಲಿಸುವುದಲ್ಲ: ಶಾಸಕ ರೈ
ಪುತ್ತೂರು: ಎಲ್ ಕೆ ಜಿ ತರಗತಿಯಂದ್ರೆ ಅದು ಕೇವಲ ಎಬಿಸಿಡಿ ಮಾತ್ರ ಕಲಿಸುವುದಕ್ಕಲ್ಲ ಮಕ್ಕಳಿಗೆ ಇಂಗ್ಲೀಷಲ್ಲಿ ಮಾತನಾಡುವುದನ್ನೂ ಕಲಿಸಬೇಕು, ಅಂತಹ ಶಿಕ್ಷಕಿಯರನ್ನೇ ನೇಮಿಸಿ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಇರ್ದೆ ಉಪ್ಪಳಿಗೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎಲ್ ಕೆ ಜಿ ತರಗತಿ ಉದ್ಘಾಟಿಸಿ ಮಾತನಾಡಿದರು.

ಪುಟ್ಟ ಮಕ್ಕಳು ತರಗತಿಗೆ ಬಂದ ಬಳಿಕ ಶಿಕ್ಷಕಿ ಮಕ್ಕಳ ಜೊತೆ ಬೇರೆ ಯಾವುದೇ ಭಾಷೆಯಲ್ಲಿ ಮಾತನಾಡಬಾರದು, ಕೇವಲ ಇಂಗ್ಲೀಷಲ್ಲೇ ಮಾತನಾಡುವಂತಾಗಬೇಕು. ಸಣ್ಣ ಪ್ರಾಯದಲ್ಲಿ ಮಕ್ಕಳು ಬೇಗನೆ ಭಾಷೆಯನ್ನು ಕಲಿತು ಬಿಡುತ್ತದೆ ಈ ಕಾರಣಕ್ಕೆ ಉತ್ತಮ ಇಂಗ್ಲೀಷ್ ಭಾಷಾ ಜ್ಞಾನ ಇರುವ ಶಿಕ್ಷಕಿಯರನ್ನೇ ನೇಮಿಸಬೇಕು ಎಂದು ಹೇಳಿದರು.
ಬಡವರ ಮಕ್ಕಳೂ ಇಂಗ್ಲೀಷ್ ಕಲಿಯಬೇಕು, ಖಾಸಗಿ ಶಾಲೆಯನ್ನೂ ಮೀರಿಸುವ ರೀತಿಯಲ್ಲಿ ಸರಕಾರಿ ಶಾಲೆಯಲ್ಲಿ ಎಲ್ ಕೆ ಜಿ ,ಯು ಕೆ ಜಿ ತರಗತಿ ನಡೆಯಬೇಕು ಪೋಷಕರು, ಶಾಲಾ ಆಡಳಿತ ಮಂಡಳಿ ಈ ವಿಚಾರದಲ್ಲಿ ಗಮನಹರಿಸಬೇಕು ಎಂದು ಸೂಚಿಸಿದರು.