ಸುಳ್ಯ: ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಗ್ರಾಮ ಕರಣಿಕಗೆ ಜಾಮೀನು ಮಂಜೂರು
ಸುಳ್ಯ ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಅರಂತೋಡು ಗ್ರಾಮ ಕರಣಿಕಗೆ ಜಾಮೀನು ಮಂಜೂರಾಗಿರುವುದಾಗಿ ತಿಳಿದು ಬಂದಿದೆ.

ಹಕ್ಕು ಖುಲಾಸೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಂತೋಡು ಗ್ರಾಮದ ಅಡ್ತಲೆ ಹರಿಪ್ರಸಾದ್ ಎಂಬವರಿಂದ ಗ್ರಾಮ ಕರಣಿಕ ಮಿಯಾ ಸಾಬ್ ಮುಲ್ಲಾ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದರು.