ರಾಜ್ಯ

ಗೃಹ ಲಕ್ಷ್ಮೀ ಯೋಜನೆ ನೋಂದಣಿ ಪ್ರಕ್ರಿಯೆಗೆ ಚಾಲನೆ: ಯಾವೆಲ್ಲಾ ದಾಖಲೆಗಳು ಬೇಕು? ನೋಂದಣಿ ಹೇಗೆ..? ಎಲ್ಲಿ..?

ಕಾಂಗ್ರೆಸ್ ಗ್ಯಾರಂಟಿ ಯೋಜನೆಯಾದ ಮನೆ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂ. ನೀಡುವ ‘ಗೃಹಲಕ್ಷ್ಮೀ ಯೋಜನೆ’ ನೋಂದಣಿ ಪ್ರಕ್ರಿಯೆಗೆ ಜು.19ರಂದು ಚಾಲನೆ ನೀಡಲಾಯಿತು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ

Read More
ಕರಾವಳಿರಾಜಕೀಯರಾಜ್ಯ

ಬೆಂಗಳೂರಿನಲ್ಲಿ ಜೆಡಿಎಸ್ ರಾಜ್ಯಮಟ್ಟದ ಅಲ್ಪಸಂಖ್ಯಾತರ ಮುಖಂಡರ ಸಭೆ; ಪಕ್ಷದ ಬಲವರ್ಧನೆಗೆ ಹೆಚ್ಚಿನ ಒತ್ತು ಕೊಡಬೇಕು-ಮೀರಾ ಸಾಹೇಬ್ ಕಡಬ

ಪುತ್ತೂರು: ಕರ್ನಾಟಕ ಪ್ರದೇಶ ಜನತಾದಳ ಜಾತ್ಯತೀತ ಪಕ್ಷದ ರಾಜ್ಯ ಮಟ್ಟದ ಅಲ್ಪಸಂಖ್ಯಾತರ ಮುಖಂಡರುಗಳ ಸಭೆ ಪಕ್ಷದ ಬೆಂಗಳೂರಿನಲ್ಲಿರುವ ಕಚೇರಿ ಜೆಪಿ ಭವನದಲ್ಲಿ ಜು.18ರಂದು ನಡೆಯಿತು.  ಸಭೆಯಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿಗಳು,ಕಡಬ ತಾಲೂಕು ಅಧ್ಯಕ್ಷರಾದ ಹಾಜಿ ಸಯ್ಯದ್ ಮೀರಾ ಸಾಹೇಬ್ ಅವರು ಮಾತನಾಡಿ ಪಕ್ಷ ಸಂಘಟನೆಗೆ ನಾವೆಲ್ಲಾ ಹೆಚ್ಚಿನ ಒತ್ತು  ಕೊಡಬೇಕು, ಪಕ್ಷದ ಕಾರ್ಯಕರ್ತರಿಗೆ ಕಳೆದ ವಿಧಾನಸಭಾ ಚುನಾವಣೆ ಸೋಲಿಗೆ ಆತ್ಮವಿಶ್ವಾಸವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳುವ ಮೂಲಕ ನಾವೆಲ್ಲಾ ಪಕ್ಷದ ಬಲವರ್ಧನೆಗಾಗಿ ಪ್ರಯತ್ನಿಸಬೇಕು ಎಂದು ಹೇಳಿದರು. ಮುಂಬರುವ, ತಾ.ಪಂ, ಜಿ.ಪಂ ಮತ್ತು ಲೋಕಸಭಾ ಚುನಾವಣೆಗಳಲ್ಲಿ ನಮ್ಮ ಪಕ್ಷ ನಿರ್ಣಾಯಕ ಪಾತ್ರವನ್ನು ವಹಿಸುವುದಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ರವರು ಪಕ್ಷದ ಜಿಲ್ಲಾ ಮುಖಂಡರುಗಳ ಸಭೆ ಕರೆದು ಮಾರ್ಗದರ್ಶನ ನೀಡುವುದರೊಂದಿಗೆ ಪಕ್ಷದ ಜಾತ್ಯಾತೀತ ನಿಲುವು, ಸಾಮಾಜಿಕ ನ್ಯಾಯವನ್ನು ಬಲಪಡಿಸಬೇಕೆಂದು ಅವರು ಹೇಳಿದರು.  ಸಭೆಯಲ್ಲಿ ಪಕ್ಷದ ರಾಜ್ಯ ಮಟ್ಟದ ಪದಾಧಿಕಾರಿಗಳು ಜಿಲ್ಲಾಮಟ್ಟದ ಹಾಗೂ ತಾಲೂಕು ಮಟ್ಟದ ಅಲ್ಪಸಂಖ್ಯಾತರ ಮುಖಂಡರುಗಳು ಉಪಸ್ಥಿತರಿದ್ದರು.

Read More
ರಾಜ್ಯ

ಗೃಹಲಕ್ಷ್ಮಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜು.19ರಂದು ಸಂಜೆ ಚಾಲನೆ ನೀಡಿದರು. ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಹಿಳಾ

Read More
ರಾಜಕೀಯರಾಜ್ಯ

ಸದನಕ್ಕೆ ಅಗೌರವ ತೋರಿದ ಬಿಜೆಪಿಯ ಹತ್ತು ಮಂದಿ ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್

ವಿಧಾನಸಭಾ ಕಲಾಪದ ವೇಳೆ ಅಶಿಸ್ತಿನ ವರ್ತನೆ ತೋರಿ, ಸದನಕ್ಕೆ ಅಗೌರವ ತೋರಿದ ಕಾರಣಕ್ಕೆ ಬಿಜೆಪಿಯ ಹತ್ತು ಮಂದಿ ಶಾಸಕರನ್ನು ಈ ವಿಧಾನಸಭಾ ಅಧಿವೇಶನ ಮುಗಿಯುವವರೆಗೆ ಸ್ಪೀಕರ್ ಯು.ಟಿ.ಖಾದರ್

Read More
ಕರಾವಳಿಕ್ರೈಂ

ಮಂಗಳೂರು: ಅಡ್ಯಾರ್ ಬಳಿ ಬೈಕ್ ಡಿವೈಡರ್ ಗೆ ಢಿಕ್ಕಿ- ವಿದ್ಯಾರ್ಥಿ ಮೃತ್ಯು

ದ್ವಿಚಕ್ರ ವಾಹನವೊಂದು ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಮಂಗಳೂರು, ಅಡ್ಯಾರ್ ಬಳಿ ಜು. 19ರಂದು ನಡೆದಿದೆ. ಮೃತ ಯುವಕನನ್ನು ಶ್ರೀನಿವಾಸ ಎಂಜಿನಿಯರಿಂಗ್

Read More
ಕರಾವಳಿ

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ: ಮಾಧ್ಯಮ ವಿಚಾರ ಸಂಕಿರಣ

ಸುಳ್ಯ: ಪತ್ರಿಕಾ ಕ್ಷೇತ್ರ ನಿಂತ ನೀರಲ್ಲ. ಪತ್ರಿಕೆಗಳಿಗೆ ಭವಿಷ್ಯವಿದೆ.‌ ಆದರೆ ಪತ್ರಕರ್ತ ಸವಾಲುಗಳ‌ ನಡುವೆ ಕೆಲಸ ಮಾಡುತ್ತಿದ್ದಾನೆ ಎಂದು ಸುರೇಶ್ ಬೆಳಗಜೆ ಹೇಳಿದರು. ಸುಳ್ಯ ತಾಲೂಕು ಕಾರ್ಯನಿರತ

Read More
ಕರಾವಳಿ

ಸುಳ್ಯ: ಕಲ್ಲಪಳ್ಳಿಪಾಣತ್ತೂರು ಸಂಪರ್ಕದ ಬಾಟೋಳಿಯಲ್ಲಿ ಧರೆ ಕುಸಿತ– ವಾಹನ ಸಂಚಾರಕ್ಕೆ ಅಡಚಣೆ

ಸುಳ್ಯ:ಕಲ್ಲಪಳ್ಳಿ ಪಾಣತ್ತೂರು ಅಂತರ್ ರಾಜ್ಯ ಸಂಪರ್ಕದ ರಸ್ತೆಯ ಬಾಟೋಳಿ ಎಂಬಲ್ಲಿ ಬೃಹತ್ ಧರೆ ಕುಸಿತ ಉಂಟಾಗಿ ರಸ್ತೆ ಮೇಲೆ ಮಣ್ಣು ಹಾಗೂ ಮರ ಬಿದ್ದುದರಿಂದ ವಾಹನ ಸಂಚಾರಕ್ಕೆ

Read More
ಕರಾವಳಿ

ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ

ನಾಯಕತ್ವ ಗುಣ, ದೃಢ ಸಂಕಲ್ಪವಿದ್ದರೆ ಉನ್ನತ ಸ್ಥಾನಕ್ಕೆ ಏರಬಹುದು-ಡಾ.ಝಕಿಯಾ ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ ಸಂಸ್ಥೆಯ ಕ್ಯಾಂಪಸ್‌ನಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ದುಬೈ ಹೇರಿಟ್ ವಾಟ್ ಯೂನಿವರ್ಸಿಟಿ ಕ್ಯಾಂಪಸ್‌ನ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಝಕಿಯಾ ಅಬ್ದುಲ್ ಸಮದ್ ಮಾತನಾಡಿ ವಿದ್ಯಾರ್ಥಿಗಳು ನಾಯಕತ್ವ ಗುಣ, ದೃಢ ಸಂಕಲ್ಪ, ಉದಾರತೆ ಹಾಗೂ ಪ್ರತಿಯೊಬ್ಬರನ್ನು ಗೌರವಿಸುವ ಕಲೆ ಕರಗತ ಮಾಡಿಕೊಂಡರೆ ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೆ ಏರಬಹುದು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳು ಯಶಸ್ಸಿನ ಗುರಿ ತಲುಪಲು ಕಠಿಣ ಪರಿಶ್ರಮ ಪಡಬೇಕು ಎಂದು ಹೇಳಿದರು. ಪ್ರಸ್ತಾವನೆಗೈದ ಸಂಸ್ಥೆಯ ಕಾರ್ಯದರ್ಶಿ ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂgಟ್ರವರು ಸಂಸ್ಥೆಯ ಪ್ರಾಂಶುಪಾಲರ ಕಾರ್ಯಚಟುವಟಿಕೆಗಳು ಮಕ್ಕಳಿಗೆ ಪ್ರೇರಣೆ ನೀಡುತ್ತಿದೆ ಎಂದು ಪ್ರಶಂಸಿಸಿದರು. ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜಯಿಗಳಾದ ವಿದ್ಯಾರ್ಥಿನಿಯರು ಹಾಗೂ ಕಲಿಕೆಯಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಮತ್ತು ಫಲಕ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮ್ಯಾನೇಜರ್ ಉಮರ್ ಅಮ್ಜದಿ ಕುಕ್ಕಿಲ ಹಾಗೂ ಪದವಿ ಪೂರ್ವ ವಿಭಾಗದ ಪ್ರಿನ್ಸಿಪಾಲ್ ಸಂಧ್ಯಾ ಪಿ ಶೆಟ್ಟಿ ಉಪಸ್ಥಿತರಿದ್ದರು. ಪದವಿ ಪ್ರಾಂಶುಪಾಲರಾದ ಮುಹಮ್ಮದ್ ಮನ್ಸೂರ್ ವಾರ್ಷಿಕ ವರದಿ ವಾಚಿಸಿದರು.

Read More
ರಾಜ್ಯ

ಗೃಹಲಕ್ಷ್ಮೀ ಯೋಜನೆಗೆ ಇಂದು ಚಾಲನೆ

ಇಂದು(19-07-2023) ಸಂಜೆ ಗಂಟೆ 5ಕ್ಕೆ ಗೃಹಲಕ್ಷ್ಮೀ ಯೋಜನೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಲಿದ್ದಾರೆ. ಕಾಂಗ್ರೆಸ್ ಸರಕಾರದ 4ನೇ ಗ್ಯಾರಂಟಿಯಾದ ಗೃಹಲಕ್ಷ್ಮೀ ಯೋಜನೆ

Read More
ಕರಾವಳಿರಾಜ್ಯ

ಮುಸ್ಲಿಂ ಒಕ್ಕೂಟದ ಮುಖಂಡರಿಂದ ಯು ಟಿ ಖಾದರ್ ರವರಿಗೆ ಸನ್ಮಾನ

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು ಟಿ ಖಾದರ್ ಅವರನ್ನು ಜು 17 ರಂದು ಬೆಂಗಳೂರಿನ ಅವರ ನಿವಾಸದಲ್ಲಿ ಮುಸ್ಲಿಂ ಒಕ್ಕೂಟದ ಮುಖಂಡರು ಭೇಟಿ ಮಾಡಿ ಸನ್ಮಾನಿಸಿದರು.ಗ್ರೇಟ್ ಸನ್

Read More
error: Content is protected !!