ರಾಷ್ಟ್ರೀಯ

ಮುಸ್ಲಿಂ ವಿದ್ಯಾರ್ಥಿಗೆ ಸಹಪಾಠಿಗಳಿಂದ ಕಪಾಳ ಮೋಕ್ಷ ಮಾಡಿಸಿದ್ದ ಪ್ರಕರಣ: ವೀಡಿಯೋ ಮೂಲಕ ಕ್ಷಮೆ ಕೇಳಿದ ಶಿಕ್ಷಕಿ

ಮುಸ್ಲಿಂ ವಿದ್ಯಾರ್ಥಿಗೆ ಸಹಪಾಠಿಗಳಿಂದ ಕಪಾಳ ಮೋಕ್ಷ ಮಾಡಿಸಿದ್ದ ಉತ್ತರ ಪ್ರದೇಶದ ಶಾಲೆಯೊಂದರ ಶಿಕ್ಷಕಿ ತೃಪ್ತಿ ತ್ಯಾಗಿ ಅವರು ವೀಡಿಯೋ ಒಂದನ್ನು ಹರಿಬಿಟ್ಟಿದ್ದು, ಕೈ ಮುಗಿದ ಕ್ಷಮೆ ಕೇಳಿರುವ

Read More
ರಾಜಕೀಯರಾಷ್ಟ್ರೀಯ

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶ ನಿರಂಕುಶ ಅಧಿಕಾರದತ್ತ- ಮಮತಾ ಬ್ಯಾನರ್ಜಿ

ಸತತ ಮೂರನೇ ಬಾರಿ ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದದ್ದೇ ಆದಲ್ಲಿ ದೇಶವು ನಿರಂಕುಶ ಅಧಿಕಾರವನ್ನು ಎದುರಿಸಬೇಕಾಗುತ್ತದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

Read More
ಕರಾವಳಿ

ನಾನು ಬಡತನದಿಂದ ಮೇಲೆ ಬಂದವ, ನನ್ನ ಕ್ಷೇತ್ರದಲ್ಲಿ ಯಾರೂ ಹಸಿವಿನಿಂದ ಇರಬಾರದು: ಅಶೋಕ್ ರೈ

ಪುತ್ತೂರು: ನಾನು ಬಡತನದಿಂದ ಮೇಲೆ ಬಂದವ, ಬಡತನ ಏನೆಂಬುದು ನನಗೆ ಗೊತ್ತಿದೆ ಈ ಕಾರಣ ನಾನು ಹಸಿವನ್ನು ಚೆನ್ನಾಗಿ ಬಲ್ಲೆ, ನಾನು ಈಗ ಶಾಸಕನಾಗಿದ್ದೇನೆ ನನ್ನ ಕ್ಷೇತ್ರದಲ್ಲಿ

Read More
ರಾಜಕೀಯರಾಜ್ಯ

ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೂ ಗೃಹಲಕ್ಷ್ಮಿ ಯೋಜನೆ ಅನ್ವಯ: ಲಕ್ಷ್ಮಿ ಹೆಬ್ಬಾಳ್ಕರ್

ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೂ ಗೃಹಲಕ್ಷ್ಮಿ ಯೋಜನೆ ಅನ್ವಯವಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆ ಪೂರ್ವ ಸಿದ್ಧತಾ

Read More
ರಾಷ್ಟ್ರೀಯ

ಚಂದ್ರನನ್ನು ‘ಹಿಂದು ರಾಷ್ಟ್ರ’ ಎಂದು ಘೋಷಿಸಬೇಕು-ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ

ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಿರುವ ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್‌ ಅವರು ಚಂದ್ರಯಾನ-3 ಚಂದ್ರನ ಅಂಗಳಕ್ಕೆ ಯಶಸ್ವಿಯಾಗಿ ಕಾಲಿಟ್ಟ ಬೆನ್ನಲ್ಲೇ ಚಂದ್ರನನ್ನು

Read More
ಅಂತಾರಾಷ್ಟ್ರೀಯಕ್ರೀಡೆ

ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಮುಡಿಗೇರಿಸಿ ಐತಿಹಾಸಿಕ ಸಾಧನೆ ಮಾಡಿದ ನೀರಜ್‌ ಚೋಪ್ರಾ

ಭಾರತದ ಜಾವೆಲಿನ್‌ ತಾರೆ ನೀರಜ್‌ ಚೋಪ್ರಾ ಅವರು ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಮುಡಿಗೇರಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದು ವಿಶ್ವ ಆ್ಯತ್ಲೆಟಿಕ್ಸ್‌ನಲ್ಲಿ ಭಾರತ ಜಯಿಸಿರುವ ಪ್ರಪ್ರಥಮ

Read More
ಕರಾವಳಿ

ಬಲೆಗೆ ಬಿದ್ದ ಭಾರೀ ಉದ್ದದ ಬಂಗುಡೆ

ಕಾರವಾರ: ಮೀನುಗಾರರು ಬೀಸಿದ ಬಲೆಗೆ 48 ಸೆಂಟಿ ಮೀಟರ್ ಉದ್ದದ ಬಂಗುಡೆ ಮೀನು ಸಿಕ್ಕಿದ್ದು, ದೇಶದಲ್ಲೇ ಅತೀ ದೊಡ್ಡದು ಎನ್ನಬಹುದಾದ ಬಂಗುಡೆ ರವಿವಾರ ಸಿಕ್ಕಿದೆ. ಈ ಬಂಗುಡೆ 19

Read More
ಕರಾವಳಿಕ್ರೈಂ

ವಿಡಿಯೋ ಮಾಡಿದ ಬಳಿಕ ವಿಷ ಸೇವಿಸಿದ್ದ ಅಬ್ದುಲ್ ನಾಸಿರ್ ಮೃತ್ಯು: 8 ಮಂದಿಯ ವಿರುದ್ಧ ಪ್ರಕರಣ ದಾಖಲು

ವಿಡಿಯೋ ಮಾಡಿದ ಬಳಿಕ ವಿಷ ಸೇವಿಸಿದ್ದ ಕಟ್ಟತ್ತಾರು ನಿಡ್ಯಣದ ಅಬ್ದುಲ್ ನಾಸಿರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆ.22ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 55/2023 ಕಲಂ 341,323,

Read More
ಕರಾವಳಿ

ಮೈದಾನಿಮೂಲೆ ಜುಮಾ ಮಸೀದಿ ಅಧ್ಯಕ್ಷರಾಗಿ ಉದ್ಯಮಿ ಯೂಸುಫ್ ಹಾಜಿ ಕೈಕಾರ 

ಪುತ್ತೂರು: ಮೈದಾನಿಮೂಲೆ ಜುಮಾ ಮಸೀದಿ ಅಧ್ಯಕ್ಷರಾಗಿ ಉದ್ಯಮಿ ಯೂಸುಫ್ ಹಾಜಿ  ಕೈಕಾರ ಆಯ್ಕೆಯಾಗಿದ್ದಾರೆ.  ಮಸೀದಿ ಗೌರವಾಧ್ಯಕ್ಷರಾದ ಅಸ್ಸಯ್ಯಿದ್ ಮುಝ್ಝಮ್ಮಿಲ್ ತಂಙಳ್ ಕಾಸರಗೋಡು ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಪ್ರಧಾನ ಕಾರ್ಯದರ್ಶಿಯಾಗಿ ಉದ್ಯಮಿ ಯೂಸುಫ್ ಮೈದಾನಿಮೂಲೆ ಹಾಗೂ ಕೋಶಾಧಿಕಾರಿಯಾಗಿ ಒಳಮೊಗ್ರು ಗ್ರಾ.ಪಂ ಉಪಾಧ್ಯಕ್ಷರಾದ ಅಶ್ರಫ್ ಉಜ್ರೋಡಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಉದ್ಯಮಿಗಳಾದ ಕೆ ಪಿ ಮುಹಮ್ಮದ್ ಮತ್ತು ರಫೀಕ್ ಅಲ್ ರಾಯ, ಜತೆ ಕಾರ್ಯದರ್ಶಿಗಳಾಗಿ ಮುನೀರ್ ಉಜ್ರೋಡಿ, ಅಝೀಝ್ ನೀರ್ಪಾಡಿ ಆಯ್ಕೆಯಾದರು. ಸದಸ್ಯರಾಗಿ ಹಸೈನಾರ್ ಎಂ ಎಂ, ಹಂಝ ಉಜಿರೋಡಿ, ಮುಹಮ್ಮದ್ ಉಜ್ರೋಡಿ (ಮಾಮು), ಉಮರ್ ನೀರ್ಪಾಡಿ, ಮುಹಮ್ಮದ್ ಕುಂಞ್ಞಿ ಇಡಿಂಜಿಲ, ರಫೀಕ್ ಎಂ ಎಂ, ಕೆ ಎ ಅಬೂಬಕರ್, ಮೊಯ್ದೀನ್ ಉಜ್ರೋಡಿ, ಇಬ್ರಾಹಿಂ ಬಾಳಯ, ಮುಸ್ತಫಾ ಮುರ್ವ ಆಯ್ಕೆಯಾದರು. ಲೆಕ್ಕಪರಿಶೋಧಕರಾಗಿ ಹಾರೀಸ್ ಮುಗೇರು ಆಯ್ಕೆಯಾದರು.

Read More
ಕರಾವಳಿರಾಜಕೀಯ

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರ ಬಹುನಿರೀಕ್ಷಿತ  ಕಚೇರಿ ನಾಳೆ (ಆ.28) ಉದ್ಘಾಟನೆ

ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈಯವರ ಬಹುನಿರೀಕ್ಷಿತ ಕಚೇರಿ ಆ.28ರಂದು ಉದ್ಘಾಟನೆಗೊಳ್ಳಲಿದೆ. ಶಾಸಕರಾಗಿ ನೂರು ದಿನದ ಬಳಿಕ ಶಾಸಕರ ಅಧಿಕೃತ ಕಚೇರಿ ಮಿನಿ ವಿಧಾನಸೌಧದ ಬಳಿ ಇರುವ ಹಳೆಯ ಪುರಸಭಾ ಕಚೇರಿ (ಪುಡಾಕಚೇರಿ)ಯಲ್ಲಿ ಉದ್ಘಾಟನೆಗೊಳ್ಳಲಿದ್ದು ಹಲವಾರು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.  ವಿಶಾಲ ಸ್ಥಳಾವಕಾಶವನ್ನು ಹೊಂದಿರುವ ಕಚೇರಿಯಲ್ಲಿ ಶಾಸಕರನ್ನು ಭೇಟಿಯಾಗಲು ಬರುವವರಿಗೆ, ಅಥವಾ ಕಚೇರಿಗೆ  ಬರುವ ಸಾರ್ವಜನಿಕರಿಗೆ ಎಲ್ಲಾ ಸೌಕರ್ಯಗಳನ್ನೊಳನ್ನು ಈ ಕಚೇರಿ ಹೊಂದಿದೆ. ಪಾರ್ಕಿಂಗ್ ವ್ಯವಸ್ಥೆಯೂ ಸಾಕಷ್ಟಿದೆ. ವಿಧಾನಸಭಾ ಅಧ್ಯಕ್ಷರಾದ ಯು ಟಿ ಖಾದರ್, ಮಾಜಿ ಸಚಿವ ಬಿ ರಮಾನಾಥ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸೇರಿದಂತೆ ಪ್ರಮುಖ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ. ಕಚೇರಿ ಉದ್ಘಾಟನೆ ಬಳಿಕ ಸುಮಾರು 160 ಕುಟುಂಬಗಳಿಗೆ ಶಾಸಕರು ಹಕ್ಕುಪತ್ರ ವಿತರಿಸಲಿದ್ದಾರೆ ಎಂದು ತಿಳಿದು ಬಂದಿದೆ. ಸಾರ್ವಜನಿಕರಿಗೆ ತ್ವರಿತಗತಿಯ ಸೇವೆ ನೀಡುವುದು ಈ ಕಚೇರಿಯ ಉದ್ದೇಶವಾಗಿದ್ದು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕರು ಈ ಕಚೇರಿಗೆ ಬಂದರೆ ಶಾಸಕರನ್ನು ಭೇಟಿಯಾಗಬಹುದು. ಕಚೇರಿಯಲ್ಲಿ ಸಾರ್ವಜನಿಕರಿಂದ ಎಲ್ಲಾ ರೀತಿಯ ಅರ್ಜಿಗಳನ್ನು ಸ್ವೀಕರಿಸಲು ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದೆ. ಯಾವುದೇ ಇಲಾಖೆಗಳಿಗೆ ಅರ್ಜಿ ಸಲ್ಲಿಸಲು ಅಥವಾ ಯಾವುದೆ ಇಲಾಖೆಯಲ್ಲಿ ಕೆಲಸ ಕಾರ್ಯಗಳು ನಡೆಯದೆ ಇದ್ದಲ್ಲಿ ಶಾಸಕರ ಕಚೇರಿಯಲ್ಲಿರುವ ಆಯಾ ಇಲಾಖೆಗೆ ಸಂಬಂಧಿಸಿದ ಸಿಬಂದಿಗಳನ್ನು ಭೇಟಿಯಾಗಿ ಮಾತನಾಡಬಹುದಾಗಿದೆ. ಕೆಲವೊಂದು ಸಮಸ್ಯೆಗಳಿಗೆ ಕಚೇರಿಯ ಸಿಬಂದಿಗಳೇ ಪರಿಹಾರ ಸೂಚಿಸುವ ಕೆಲಸವನ್ನು ಮಾಡಲಿದ್ದಾರೆ. ನನ್ನ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಮಿನಿ ವಿಧಾನಸೌಧದ ಬಳಿಯೇ ಹೊಸ ಕಚೇರಿಯನ್ನು ತೆರೆದಿದ್ದು ಸಾರ್ವಜನಿಕರ ಸೇವೆಗೆ ಸಿಬಂದಿಗಳನ್ನು ನೇಮಕ ಮಾಡಿದ್ದೇನೆ. ಯಾವುದೇ ಸಮಸ್ಯೆಗಳಿದ್ದರೂ, ತೊಂದರೆಗೊಳಗಾದವರು ಶಾಸಕರ ಕಚೇರಿಗೆ ಬಂದು ತಿಳಿಸಬಹುದು. ದೂರು, ಮನವಿ ಇದ್ದರೂ ಕೊಡಬಹುದು. ಕ್ಷೇತ್ರದ ಎಲ್ಲರಿಗೂ ನನ್ನ ಕಚೇರಿಗೆ ಮುಕ್ತವಾಗಿ ಬರಲು ಅವಕಾಶ ಇದೆ ಎಂದು ಶಾಸಕ ಅಶೋಕ್ ಕುಮಾರ್ ತಿಳಿಸಿದ್ದಾರೆ.

Read More
error: Content is protected !!