ಕರಾವಳಿ

ಸಮಾಜ ಸೇವೆಯ ತುಡಿತ ನಮ್ಮಲ್ಲಿರಬೇಕು- ಮಹಮ್ಮದ್ ಕುಕ್ಕುವಳ್ಳಿ

ಲಯನ್ಸ್ ಕ್ಲಬ್ ಸಂಸ್ಥೆಯು ಸಮಾಜ ಸೇವೆಗೆ ಪ್ರೇರಣೆ ಕೊಡುವ ಸಂಸ್ಥೆಯಾಗಿದ್ದು ಲಯನ್ಸ್‌ನ ಕಾರ್ಯಚಟುವಟಿಕೆ ನೋಡಿ ನಾನು ಲಯನ್ಸ್ ಕ್ಲಬ್‌ಗೆ ಸೇರಿದ್ದೇನೆ. ಸಾಮಾಜಿಕ ಬದ್ದತೆ, ನಿಷ್ಠೆ ಮತ್ತು ಜವಾಬ್ದಾರಿ ಲಯನ್ಸ್ ಮೂಲಕ ನಮಗೆ ಸಿಗುತ್ತಿದ್ದು ನಾವು ಬೆಳೆಯಬೇಕು ಇನ್ನೊಬ್ಬರನ್ನು ಬೆಳೆಸಬೇಕೆನ್ನುವ ಮನಸ್ಸು ನಮ್ಮಲ್ಲಿದ್ದಾಗ ನಾವು ಎತ್ತರಕ್ಕೆ ಬೆಳೆಯಲು ಸಾಧ್ಯ. ನಾವು ಯಾವುದೇ ಸಂಸ್ಥೆಯಲ್ಲಿ ತೊಡಗಿಸಿಕೊಂಡರೂ ಸಮಾಜ ಸೇವೆಯ ತುಡಿತ ನಮ್ಮಲ್ಲಿರಬೇಕು, ಆಗ ಸಮಾಜವೂ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಎಂದು ಲಯನ್ಸ್ ಕ್ಲಬ್ ಪುತ್ತೂರು-ಪಾಣಾಜೆ ಇದರ ಅಧ್ಯಕ್ಷ ಲ| ಮಹಮ್ಮದ್ ಕುಕ್ಕುವಳ್ಳಿ ಹೇಳಿದರು.

ಜು.23ರಂದು ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆದ ಲಯನ್ಸ್ ಕ್ಲಬ್ ಪುತ್ತೂರು-ಪಾಣಾಜೆ ಇದರ ಪದಗ್ರಹಣ ಸಮಾರಂಭ, ಸ್ಥಾಪಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

317ಡಿ ಜಿಲ್ಲೆ ದ್ವಿತೀಯ ಉಪ ಜಿಲ್ಲಾ ರಾಜ್ಯಪಾಲರಾದ ಲ|ಕುಡ್ಪಿ ಅರವಿಂದ ಶೆಣೈ ಪಿಎಂಜೆಎಫ್ ಅವರು ಪದಗ್ರಹಣ ನಡೆಸಿಕೊಟ್ಟರು.

ರಾಜ್ಯ ಸಂಪನ್ಮೂಲ ವ್ಯಕ್ತಿ ಲ|ಇಕ್ಬಾಲ್ ಬಾಳಿಲ ವಿದ್ಯಾರ್ಥಿಗಳಿಗೆ ಪ್ರೇರಣಾ ತರಬೇತಿ ಶಿಬಿರ ನಡೆಸಿದರು. ಮಾಜಿ ಪ್ರಾಂತೀಯ ಅಧ್ಯಕ್ಷ ಲ.ಹೇಮನಾಥ ಶೆಟ್ಟಿ ಕಾವು ಹಾಗೂ ಅವರ ಪತ್ನಿ ಅನಿತಾ ಹೇಮನಾಥ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇರ್ದೆ, ಬೆಟ್ಟಂಪಾಡಿ, ನಿಡ್ಪಳ್ಳಿ, ಪಾಣಾಜೆ ಗ್ರಾಮದ ೫ ಶಾಲೆಗಳ 15 ವಿದ್ಯಾರ್ಥಿಗಳಿಗೆ 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಾಡಿದ ಸಾಧನೆಗಾಗಿ ವಿದ್ಯಾಕಿರಣ ಪ್ರಶಸ್ತಿ ನೀಡಲಾಯಿತು.  ಜೇನು ಕೃಷಿಯಲ್ಲಿ ಸಾಧನೆ ಮಾಡಿರುವ ಮನಮೋಹನ್ ಅರಂಬ್ಯ ಅವರನ್ನು ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಲಯನ್ಸ್ ಕ್ಲಬ್‌ನ ಕುಡ್ಪಿ ಅರವಿಂದ ಶೆಣೈ, ಸುದರ್ಶನ್ ಪಡಿಯಾರ್, ಲ್ಯಾನ್ಸಿ ಮಸ್ಕರೇನ್ಹಸ್, ಪಾವನರಾಮ, ಶ್ರೀಪ್ರಸಾದ್ ಪಾಣಾಜೆ ಹಾಗೂ ಇಕ್ಬಾಲ್ ಬಾಳಿಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ದಿವ್ಯನಾಥ ಶೆಟ್ಟಿ ಕಾವು ಅವರನ್ನು ಗೌರವಿಸಲಾಯಿತು.

ಲ|ಸೀತರಾಮ ಗೌಡ ಪ್ರಾರ್ಥಿಸಿದರು. ಲ|ಪುಷ್ಪರಾಜ ಶೆಟ್ಟಿ ಧ್ವಜವಂದನೆ ಮಾಡಿದರು. ಲ|ಶ್ಯಾಂಜೀತ್ ರೈ ಲಯನ್ ನೀತಿ ಸಂಹಿತೆ ನಿರ್ವಹಿಸಿದರು. ಲಯನ್ಸ್ ಕ್ಲಬ್ ಪುತ್ತೂರು-ಪಾಣಾಜೆ ಇದರ ಪ್ರ.ಕಾರ್ಯದರ್ಶಿ ಲ|ದಯಾನಂದ ರೈ ಕೋರ್ಮಂಡ ಸ್ವಾಗತಿಸಿದರು. ಲ|ಶ್ರೀಪ್ರಸಾದ್ ಪಾಣಾಜೆ ವಂದಿಸಿದರು.

ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ವಲಯ ಅಧ್ಯಕ್ಷ ಪಾವನರಾಮ, ಲಯನ್ಸ್ ಕ್ಲಬ್ ಪುತ್ತೂರು-ಪಾಣಾಜೆ ಕೋಶಾಧಿಕಾರಿ ಪ್ರಕಾಶ್ ರೈ ಬೈಲಾಡಿ, ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಪುತ್ತೂರು ಪಾಣಾಜೆ ಇದರ ಸದಸ್ಯರಾದ ಲ|ಶಶಿಕುಮಾರ್ ರೈ ಬಾಲ್ಯೊಟ್ಟು, ಲ|ಗಂಗಾಧರ ಆಳ್ವ, ಲ|ಯೂಸುಫ್ ಗೌಸಿಯಾ ಸಾಜ, ಲ|ಜಲೀಲ್ ಬೈತಡ್ಕ, ಲ|ಧನಂಜಯ ಯು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!