ನನಗೆ ಶಾಸಕರನ್ನು ಕಾಣಬೇಕು..ವೃದ್ದೆಯ ಆಸೆ ಈಡೇರಿಸಿದ ಶಾಸಕರು
ಪುತ್ತೂರು: ನನಗೆ ಪುತ್ತೂರು ಶಾಸಕ ಅಶೋಕ್ ರೈಯವರನ್ನು ಕಾಣಬೇಕು ಎಂದು ಅನಾರೋಗ್ಯ ಪೀಡಿತ ವೃದ್ದ ತಾಯಿಯೋರ್ವರು ತನ್ನ ಪುತ್ರನಲ್ಲಿ ಬೇಡಿಕೆ ಇಟ್ಟಿದ್ದು, ಈ ವಿಚಾರವನ್ನು ಪುತ್ರ ಶಾಸಕರಲ್ಲಿ ತಿಳಿಸಿದ್ದು ಶಾಸಕರು ವೃದ್ದೆ ತಯಿಯ ಮನೆಗೆ ತೆರಳಿ ಅವರಿಂದ ಆಶೀರ್ವಾದ ಪಡೆದಿದ್ದಾರೆ.

ಉಪ್ಪಿನಂಗಡಿ ಗ್ರಾಮದ ರಾಮನಗರ ನಿವಾಸಿ ದೀಪಕ್ ಪೈ ಯವರ ತಾಯಿ ಅನಾರೋಗ್ಯ ಪೀಡಿತರಾಗಿ ಮನೆಯಲ್ಲೇ ಇದ್ದು ಅವರು ತನಗೆ ಶಾಸಕ ಅಶೋಕ್ ರೈಯವರನ್ನು ಕಾಣಬೇಕು ಎಂಬ ಅಭಿಲಾಷೆಯನ್ನು ತನ್ನ ಪುತ್ರನಲ್ಲಿ ಹೇಳಿಕೊಂಡಿದ್ದರು. ತಾಯಿಯ ಅಭಿಲಾಷೆಯ ಕುರಿತು ಪುತ್ರ ದೀಪಕ್ ಪೈ ಶಾಸಕರಲ್ಲಿ ತಿಳಿಸಿದ್ದಾರೆ. ಆ ಕ್ಷಣವೇ ದೀಪಕ್ ಪೈ ಅವರ ಮನೆಗೆ ತೆರಳಿ ತಾಯಿ ದಿವ್ಯಾ ಡಿ ಪೈ ಅವರಿಂದ ಆಶೀರ್ವಾದ ಪಡೆದುಕೊಂಡಿದ್ದಾರೆ.