ಸುಳ್ಯ ಕಾಂಗ್ರೆಸ್: ಸೋಲಿನ ಕಾರಣಗಳು ಸ್ಪಷ್ಟವಾಗಿರುವಾಗ ಅಲ್ಲೊಂದು ಪರಾಮರ್ಶೆ ಎಂಬ ಪ್ರಹಸನ ಯಾಕೆ…
✍️ಹೈದರ್ ಆಲಿ ಐವತ್ತೊಕ್ಲು
ಪುತ್ತೂರು: ಸುಳ್ಯ ಕಾಂಗ್ರೆಸ್ ನ್ನು ಸರಿಪಡಿಸಲು ಒಗ್ಗಟ್ಟಿನಿಂದ ಪಕ್ಷವನ್ನು ಕಟ್ಟುವ ಕೆಲಸ ಮೊದಲು ಆಗಬೇಕಾಗಿದೆ. ಪಕ್ಷದ ಹಿತಾಸಕ್ತಿ ಮುಖ್ಯ. ಸಾವದಾನ, ಸಮಾಧಾನ, ತಾಳ್ಮೆ ಮುಖ್ಯ. ಯಾರನ್ನೂ ಉಚ್ಛಾಟಿಸಿದರೂ ಪಕ್ಷ ಭಾರಿ ಬೆಲೆ ತೆರಬೇಕಾಗುತ್ತದೆ.ಉಚ್ಛಾಟಿಸಲು ಕಾರಣಗಳೇ ಇಲ್ಲ.ಉಚ್ಛಾಟಿತರು ಸಭೆಗೆ ಬಂದಿದ್ದರೆ ಅದು ಪಕ್ಷದ ಮೇಲಿನ ಅಭಿಮಾನದಿಂದ.ನೀನು ಯಾಕೆ ಅನ್ನುವ ಅಧಿಕಾರ ಯಾರಿಗೂ ಇಲ್ಲ ಎಂದು ಬರಹಗಾರ, ವಿಶ್ಲೇಷಕ ಹೈದರಾಲಿ ಐವತ್ತೊಕ್ಲು ಹೇಳಿದ್ದಾರೆ.
ಪಕ್ಷದ ಅಧ್ಯಕ್ಷರುಗಳು, ವೀಕ್ಷಕರು ಮಾತ್ರ ಸಭೆಯನ್ನು ನಿಯಂತ್ರಸಬೇಕೆ ಹೊರತು ಎಲ್ಲರೂ ಮಾತಿಗಿಳಿದರೆ,ಪ್ರಶ್ನಿಸಹೊರಟರೆ ಗದ್ದಲ ,ಗೊಂದಲವೇ ಹೊರತು ಪರಾಮರ್ಶೆ ನಡೆಯದು,ಸಮಸ್ಯೆಗಳು ಬಗೆಹರಿಯದು. ಮುಂದೆಯೂ ರಾಜ್ಯಾಧ್ಯಕ್ಷರು ನಿಷ್ಕ್ರಿಯಗೊಂಡಿರುವ ಜಿಲ್ಲಾಧ್ಯಕ್ಷರು, ಜವಾಬ್ದಾರಿಯುತ ತಾಲೂಕು ಅಧ್ಯಕ್ಷರು,ಪುತ್ತೂರು ಶಾಸಕರ ಸಹಭಾಗಿತ್ವದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಾಣಬೇಕು ಎಂದು ಅವರು ತಿಳಿಸಿದ್ದಾರೆ.
ಪಕ್ಷವೇ ಮುಖ್ಯ ಹೊರತು ವ್ಯಕ್ತಿಗಳಲ್ಲ.ಕೆಲವರ ಅಹಂಗಳಿಗೆ ಪಕ್ಷ ,ಸಾವಿರಾರು ಕಾರ್ಯಕರ್ತರು ಬಲಿಯಾಗಬಾರದು. ಚುನಾವಣೆಗಳು ಬರುತ್ತಲೇ ಇರುತ್ತವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಯುಗ ಆರಂಭಗೊಂಡಿದ್ದು ಸುಳ್ಯ ಕಾಂಗ್ರೆಸ್ ನ ಬೆಳವಣಿಗೆಗಳು ಪಕ್ಷಕ್ಕೆ ಮಾರಕವಾಗದಿರಲಿ ಎಂದು ಅವರು ತಿಳಿಸಿದ್ದಾರೆ.