ಆಸ್ತಿ ವಿವಾದದಲ್ಲಿ ಸಂಪ್ಯದ ಉಸ್ಮಾನ್ ಕೊಲೆ ಪ್ರಕರಣ: ಆರೋಪಿ ಸಹೋದರರು ಪೊಲೀಸ್ ಕಸ್ಟಡಿಗೆ
ಸುಳ್ಯ: ಚೆಂಬು ಗ್ರಾಮದ ಕುದ್ರೆಪಾಯ ಎಂಬಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿ ಸಹೋದರರಿಂದ ಕೊಲೆಯಾದ ಸಂಪ್ಯದ ಉಸ್ಮಾನ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಆರೋಪಿ ಸಹೋದರರನ್ನು ಘಟನಾ ಸ್ಥಳಕ್ಕೆ ಕೊಂಡೊಯ್ದು ಮಹಜರು ಮಾಡಲಾಗಿದ್ದು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ .

ಆಸ್ತಿ ವಿವಾದಕ್ಕೆ ಸಂಬಂಧಿಸಿ ಉಸ್ಮಾನ್ ಸಹೋದರರಾದ ರಫೀಕ್ ಮತ್ತು ಸತ್ತಾರ್ ಅಣ್ಣ ಉಸ್ಮಾನ್‌ರನ್ನು ಚೂರಿಯಿಂದ ಇರಿದು ಜು. 14 ರಂದು ಹತ್ಯೆ ಮಾಡಿದ್ದರು.
ಬಳಿಕ ಅವರು ರಿಕ್ಷಾದಲ್ಲಿ ಅರಂತೋಡುವರೆಗೆ ಬಂದು ಮತ್ತೊಂದು ರಿಕ್ಷಾದಲ್ಲಿ ಸುಳ್ಯಕ್ಕೆ ಬಂದು ಕೇರಳ ಕಡೆಗೆ ಪರಾರಿಯಾಗಿದ್ದರು.
ಕೊಡಗು ಪೊಲೀಸರು ಜು.15ರಂದು ರಾತ್ರಿ ಕೇರಳದಲ್ಲಿ ಬಂಧಿಸಿ, ಕರೆತಂದು ನ್ಯಾಯಾಧೀಶರೆದುರು ಹಾಜರುಪಡಿಸಿದ್ದರು. ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಧೀಶರು ಸೂಚಿಸಿದ್ದರು. ಇಂದು ಮಡಿಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.