ಜಿಲ್ಲೆ

ಬಾಳೆಹೊನ್ನೂರು ಮಸೀದಿಕೆರೆ ಮಸೀದಿಯಲ್ಲಿ ಬಕ್ರೀದ್‌ ಹಬ್ಬ ಆಚರಣೆ : SSF ಮಸೀದಿಕೆರೆ ಯುನಿಟ್ ವತಿಯಿಂದ ಸಿಹಿ ವಿತರಣೆ

ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ಮಸೀದಿಕೆರೆಯ ಅಲ್ ಬದ್ರಿಯಾ ಜುಮಾ ಮಸೀದಿಯಲ್ಲಿ ತ್ಯಾಗ,ಬಲಿದಾನದ ಸಂಕೇತವಾದ ಬಕ್ರೀದ್‌ ಹಬ್ಬ ಆಚರಿಸಲಾಯಿತು.

ನಮಾಝ್‌ಗೆ ನೇತೃತ್ವವನ್ನು ನೀಡಿದ ಮಸೀದಿಯ ಖತೀಬರಾದ ಸ್ವಾದಿಕ್ ಸಖಾಫಿ ಕರಿಂಬಿಲ ಇವರು ತ್ಯಾಗ,ಬಲಿದಾನ,ಶಾಂತಿ ಸೌಹಾರ್ದತೆಯ ಬಗ್ಗೆ ಭಾಷಣ ಮಾಡಿದರು. ನಮಾಝ್‌ನ ನಂತರ SSF ಮಸೀದಿಕೆರೆ ಯುನಿಟ್ ಇದರ ವತಿಯಿಂದ ಸೆಪ್ಟೆಂಬರ್ 10 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕರ್ನಾಟಕ ವಿದ್ಯಾರ್ಥಿ ಸಮಾವೇಶ ಹಾಗೂ ನವೆಂಬರ್ ತಿಂಗಳಿನಲ್ಲಿ ಮುಂಬೈ‌ನ ಏಕತಾ ಉದ್ಯಾನದಲ್ಲಿ ನಡೆಯಲಿರುವ SSF ನ ಐವತ್ತನೇ ಸಂಭ್ರಮಾಚರಣೆಯ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಪ್ರಚಾರಾರ್ಥವಾಗಿ ‘ಗೋಲ್ಡನ್‌ ಕಿ ಮುಹಬ್ಬತ್’ ಎಂಬ ಹೆಸರಿನೊಂದಿಗೆ ಸರ್ವ ಧರ್ಮೀಯರಿಗೂ ಸಿಹಿ ವಿತರಿಸಿದರು.

ಈ ವೇಳೆ SYS ಮಸೀದಿಕೆರೆ ಯುನಿಟ್‌ನ ಅಧ್ಯಕ್ಷರಾದ ಇಬ್ರಾಹಿಂ,ಕಾರ್ಯದರ್ಶಿ ಉಮರ್,SSF ಚಿಕ್ಕಮಗಳೂರು ಜಿಲ್ಲಾ ದ‌ಅವಾ ಕಾರ್ಯದರ್ಶಿ ಜಾಶಿರ್‌ ಹಿಮಮಿ ಸಖಾಫಿ,SSF ಬಾಳೆಹೊನ್ನೂರು ಡಿವಿಷನ್ ಪ್ರಧಾನ ಕಾರ್ಯದರ್ಶಿ ರಮೀಝ್ ಅಕ್ಷರನಗರ, ಮಸೀದಿಕೆರೆ ಯುನಿಟ್‌ನ ಕಾರ್ಯದರ್ಶಿಯಾದ ಖಲಂದರ್ ಮಸೀದಿಕೆರೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!