ಡಿ.30: ಪ್ರಭಾಷಣಗಾರ ನೌಶಾದ್ ಬಾಖವಿ ಬೈತಡ್ಕಕ್ಕೆ
ಪುತ್ತೂರು: ಜುಮಾ ಮಸೀದಿ ಮತ್ತು ದರ್ಗಾ ಶರೀಫ್ ಬೈತಡ್ಕ ಹಾಗೂ ಮುಸ್ಲಿಂ ಯೂತ್ ಫೆಡೇರೆಶನ್ ಬೈತಡ್ಕ ಕಾಣಿಯೂರು ಇದರ ವತಿಯಿಂದ ಏಕದಿನ ಧಾರ್ಮಿಕ ಮತ ಪ್ರಭಾಷಣ 30/12/2023ರಂದು ರಾತ್ರಿ ಗಂಟೆ 7 ರಿಂದ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಖ್ಯ ಪ್ರಭಾಷಣಗಾರರಾಗಿ
ಅಂತಾರಾಷ್ಟ್ರೀಯ ವಾಗ್ಮಿ ನೌಶಾದ್ ಬಾಖವಿ ತಿರುವನಂತಪುರ ಕೇರಳ ಪ್ರಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವಾರು ಉಲಮಾ, ಉಮರಾಗಲು ಹಾಗೂ ಧಾರ್ಮಿಕ, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಮುಸ್ಲಿಂ ಯೂತ್ ಫೆಡೇರೆಶನ್ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.