ಬಡವರಿಗೆ ಅನ್ಯಾಯವಾದರೆ ಸಹಿಸಲ್ಲ- ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ
ಕಡಬ: ಸರಕಾರಿ ಕಚೇರಿಗಳಿಗೆ ಬರುವ ಜನರನ್ನು ಯಾವುದೇ ಕಾರಣಕ್ಕೂ ಸತಾಯಿಸಬಾರದು. ಅವರಿಗೆ ಸರಿಯಾದ ಮಾಹಿತಿ ನೀಡಿ ಅವರ ಕೆಲಸ ಕಾರ್ಯಗಳನ್ನು ಕೂಡಲೇ ಮಾಡಿಕೊಡಬೇಕು ಎಂದು ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.

ಕಡಬ ತಾಲೂಕು ಪಂಚಾಯತಿನ ನೂತನ ಕಟ್ಟಡದ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಸರಕಾರಿ ಕಚೇರಿಗೆ ಬರುವ ಜನರಿಗೆ ಸರಿಯಾದ ಸೇವೆ ಸಿಗಬೇಕು. ಬಡ ಜನರಿಗೆ ಅನ್ಯಾಯವಾದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಈವರೆಗೆ ಸಾರ್ವಜನಿಕರಿಗೆ ಅಧಿಕಾರಿಗಳಿಂದ ತೊಂದರೆಯಾಗಿದ್ದರೆ ಇನ್ನು ಮುಂದೆ ಹಾಗೆ ಆಗಬಾರದು. ಉತ್ತಮ ಸೇವೆಯ ಮೂಲಕ ಅಧಿಕಾರಿಗಳು ಜನರ ಮನಸ್ಸು ಗೆಲ್ಲಬೇಕು ಎಂದು ಭಾಗೀರಥಿ ಮುರುಳ್ಯ ಕಿವಿಮಾತು ಹೇಳಿದರು.