ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಕುರಿತು ಪ್ರಸ್ತಾವನೆಯೇ ಇಲ್ಲಿಂದ ಹೋಗಿರಲಿಲ್ಲ:ಅಶೋಕ್ ರೈ
ಪುತ್ತೂರು ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಕುರಿತು ಪ್ರಸ್ತಾವನೆ ಇಲ್ಲಿಂದ ಹೋಗಿರಲಿಲ್ಲ. ನಾನು ವಿಚಾರಿಸಿದಾಗ ಜಾಗಕ್ಕೆ ಸಂಬಂಧಿಸಿದ ನಕ್ಷೆ ಮಾತ್ರ ತಾಲೂಕು ಕಚೇರಿಯಲ್ಲಿ ಇತ್ತು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

ಪುತ್ತೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ಅವರು ಮೆಡಿಕಲ್ ಕಾಲೇಜು ವಿಚಾರ ನಾನು ಬಂದ ಬಳಿಕ ಅದನ್ನು ಸಹಾಯಕ ಕಮಿಷನರ್ ಮೂಲಕ ರೆಕಮಂಡೇಷನ್ ಮಾಡಿ ಆರೋಗ್ಯ ಇಲಾಖೆ ಕಾರ್ಯದರ್ಶಿಯವರಿಗೆ ಕಳುಹಿಸಿದ್ದು ಅಲ್ಲಿ ಒಂದು ವಾರದೊಳಗೆ ಎಲ್ಲಾ ಕೆಲಸ ಮುಗಿಸಲಾಗಿದೆ, ರಿವೈಸ್ಡ್ ಬಜೆಟ್ ನಲ್ಲಿ ಇದನ್ನು ಸೇರಿಸಲು ಪ್ರಯತ್ನಿಸುತ್ತೇನೆ, ಇಲ್ಲದಿದ್ದರೆ ಕ್ಯಾಬಿನೆಟ್ ನಲ್ಲಾದರೂ ಅನುಮೋದನೆ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಅಶೋಕ್ ರೈ ಹೇಳಿದ್ದಾರೆ.