ಕರಾವಳಿರಾಜಕೀಯರಾಜ್ಯ

ಯು ಟಿ ಖಾದರ್ ಸ್ಪೀಕರ್ ಹಿನ್ನೆಲೆ: ದಕ ಜಿಲ್ಲೆಯಲ್ಲಿ ಯಾರಿಗೊಲಿಯುತ್ತೆ ಸಚಿವ ಸ್ಥಾನ?

ಪುತ್ತೂರು: ಮಂಗಳೂರು ಶಾಸಕ ಯು.ಟಿ.ಖಾದರ್ ಅವರು ವಿಧಾನಸಭೆಯ ಸ್ಪೀಕರ್ ಹುದ್ದೆಗೆ ಆಯ್ಕೆಯಾಗಲಿರುವುದರಿಂದ ಜಿಲ್ಲಾವಾರು ಪ್ರಾತಿನಿಧ್ಯದಲ್ಲಿ ದ.ಕ. ಜಿಲ್ಲೆಯಿಂದ ಯಾರಿಗೆ ಸಚಿವ ಸ್ಥಾನ ಸಿಗಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ.

ವಿಧಾನ ಪರಿಷತ್ ಶಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ|ಮಂಜುನಾಥ್ ಭಂಡಾರಿ, ದ.ಕ.ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರೂ ಆಗಿರುವ ಹರೀಶ್‌ ಕುಮಾರ್ ಇಲ್ಲವೇ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಪೈಕಿ ಓರ್ವರಿಗೆ ಸಚಿವ ಸ್ಥಾನ ದೊರೆಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಈ ಮೂವರ ಪೈಕಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರೂ ಆಗಿರುವ ಡಾ|ಮಂಜುನಾಥ್ ಭಂಡಾರಿ ಅವರ ಹೆಸರು ಸಚಿವ ಸ್ಥಾನಕ್ಕೆ ಪ್ರಬಲವಾಗಿ ಕೇಳಿ ಬರುತ್ತಿದೆ.

ಇನ್ನು ಅಶೋಕ್ ರೈ ಹೆಸರೂ ಸಚಿವ ಸ್ಥಾನಕ್ಕೆ ಕೇಳಿ ಬರುತ್ತಿದ್ದು ಸಚಿವ ಸ್ಥಾನದ ಜೊತೆಗೆ ದಕ ಜಿಲ್ಲಾ ಉಸ್ತುವಾರಿ ಸಚಿವರೂ ಆಗುವ ಸಾಧ್ಯತೆಯಿದೆ ಎನ್ನುವ ಲೆಕ್ಕಾಚಾರ ಇದೆ.

Leave a Reply

Your email address will not be published. Required fields are marked *

error: Content is protected !!