ಮಂಗಳೂರು ಹಿದಾಯ ಫೌಂಡೇಶನ್ ವತಿಯಿಂದ ಸೇವಾ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಕ್ರಮ: ಪುತ್ತೂರು ಕಮ್ಯೂನಿಟಿ ಸೆಂಟರಿನ ಕೌನ್ಸಿಲರ್’ಗಳಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ
ಮಂಗಳೂರಿನ ಹಿದಾಯ ಫೌಂಡೇಶನ್ ಸೇವಾ ಸಂಸ್ಥೆ ವಿದ್ಯಾರ್ಥಿಗಳಿಗೆ ಆಯೋಜಿಸಿದ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಕ್ರಮವನ್ನು ಪುತ್ತೂರು ಕಮ್ಯೂನಿಟಿ ಸೆಂಟರಿನ ಕೌನ್ಸಿಲರ್ ಗಳು ಯಶಸ್ವಿಯಾಗಿ ನಡೆಸಿಕೊಟ್ಟರು.
ಶಿಕ್ಷಣ ಕ್ಷೇತ್ರದಲ್ಲಿ ಕಮ್ಯೂನಿಟಿ ಸೆಂಟರಿನ ಯೋಜನೆ ಮತ್ತು ಪದ್ದತಿಗಳನ್ನು ಅಭಿನಂದಿಸಿದ ಹಿದಾಯದ ಸ್ಥಾಪಕರಾದ ಖಾಸಿಂ ಅಹ್ಮದ್ ಅವರು ಪುತ್ತೂರು ಕಮ್ಯೂನಿಟಿ ಸೆಂಟರಿನ ಕೌನ್ಸಿಲರ್ ಗಳ ಜೊತೆಯೂ ಸಮಾಲೋಚಿಸಿ ಅವರ ಕೌನ್ಸಿಲಿಂಗ್ ಮೆಥಡ್ ಗಳ ಬಗ್ಗೆ ತಿಳಿದುಕೊಂಡರು.
ಹಿದಾಯ ಫೌಂಡೇಶನ್ ನ ಮೂಲಕ ಆಯೋಜಿಸಿದ ಶೈಕ್ಷಣಿಕ ಮಾರ್ಗದರ್ಶನವನ್ನು ಸುಮಾರು 50 ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡರು. ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯ, ಆಸಕ್ತಿ, ಕೌಶಲ್ಯ ಮತ್ತು ಕನಸುಗಳನ್ನು ಗುರುತಿಸಿ ಅವರ ಮೌಲ್ಯಮಾಪನ ಮತ್ತು ಸಾಮರ್ಥ್ಯ ಪರೀಕ್ಷೆ ಮಾಡಿ ಗುರಿ ನಿಶ್ಚಯಿಸಲಾಯಿತು.
ಕಮ್ಯೂನಿಟಿ ಸೆಂಟರಿನಲ್ಲಿ ಸುಮಾರು ಒಂದು ವರ್ಷಗಳ ಕಾಲ ತರಬೇತಿ ಪಡೆದ ನುರಿತ ಕೌನ್ಸಿಲರ್ ಗಳು ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿ ಅವರಿಗೆ ವೃತ್ತಿ ಮಾರ್ಗದರ್ಶನ ನೀಡಿದರು.
ಕೇವಲ ಒಂದು ವರ್ಷದ ಅವಧಿಯಲ್ಲಿ ಅತ್ಯುತ್ತಮ ಕೌನ್ಸಿಲರ್ ಗಳ ತಂಡವನ್ನು ರಚಿಸಿ ಅವರಲ್ಲಿ ಸಾಮಾಜಿಕ ಕಾಳಜಿ ಬೆಳೆಸಿ ದೇಶದ ಭವಿಷ್ಯದ ಮಕ್ಕಳಿಗೆ ಮಾರ್ಗದರ್ಶನ ನೀಡಲು ತರಭೇತು ಗೊಳಿಸಿದ ಪುತ್ತೂರು ಕಮ್ಯೂನಿಟಿ ಸೆಂಟರಿನ ಯೋಜನೆಯನ್ನು ಹಿದಾಯ ಫೌಂಡೇಶನ್ ನ ಸ್ಥಾಪಕರಾದ ಖಾಸಿಂ ಅಹ್ಮದ್ ಶ್ಲಾಘಿಸಿದರು.