40% ಕಮಿಷನ್’ಗಾಗಿ ಕೇವಲ ರಸ್ತೆಗಳನ್ನು ಮಾಡಿ ಜನರ ಕಣ್ಣಿಗೆ ಮಣ್ಣೆರಿಚಿದ್ದಾರೆ: ದಿವ್ಯ ಪ್ರಭಾ
ಪುತ್ತೂರು: ಪುತ್ತೂರು ನಗರದ ಬನ್ನೂರು, ಕೇಪುಲು, ತಾರಿ ಗುಡ್ಡೆ ಹಾಗೂ ಕೃಷ್ಣಾನಗರ ವಾರ್ಡ್ ಗಳಲ್ಲಿ ಇಂದು ಜೆಡಿಎಸ್ ಅಭ್ಯರ್ಥಿ ಶ್ರೀಮತಿ ದಿವ್ಯ ಪ್ರಭಾ ಗೌಡ ರವರು ಸಾರ್ವಜನಿಕ ಭಾಷಣ ನಡೆಸಿ ಮತ ಯಾಚನೆ ನಡೆಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ದಿವ್ಯ ಪ್ರಭಾ ರವರು ಪುತ್ತೂರು ಕ್ಷೇತ್ರದಲ್ಲಿ ಈಗ ಬಿಜೆಪಿ vs ಜೆಡಿಎಸ್ ಸ್ಪರ್ಧೆಯಾಗಿ ಮಾರ್ಪಟ್ಟಿದೆ ಯಾಕೆಂದರೆ ಕಾಂಗ್ರೆಸ್ನಲ್ಲಿ ಇರುವ ಅಭ್ಯರ್ಥಿ ಬಿಜೆಪಿಯಿಂದ ಬಂದವರು ಹಾಗೇಯೇ ಪಕ್ಷೇತರ ಅಭ್ಯರ್ಥಿ ಕೂಡ ಬಿಜೆಪಿಯವರು ಎಂದು ಲೇವಡಿ ಮಾಡಿದರು.
ನಗರದ ವಾರ್ಡ್ ಗಳಿಗೆ ಶಾಸಕರು ಕೋಟಿ ಕೋಟಿ ಅನುದಾನ ನೀಡಿದ್ದಾರೆ ಎಂದು ಫ್ಲೆಕ್ಸ್ ಬ್ಯಾನರ್ ಗಳಲ್ಲಿ ಪ್ರಚಾರ ನೀಡಿದ್ದಾದರೆಯೆ ಹೊರತು ಅಭಿವೃದ್ಧಿಯ ಒಂದಕ್ಷರ ಕೂಡ ನಡೆದಿಲ್ಲ. ಕಾಲೋನಿಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆಗಳಿಲ್ಲ , ಚರಂಡಿಯಲ್ಲಿನ ಕಸ ಕಡ್ಡಿ ಬೆಳೆದ ಗಿಡಗಳನ್ನು ಸ್ವಚ್ಚಗೊಳಿಸದೆ ವರ್ಷಗಳೇ ಕಳೆದಿವೆ 40% ಆಸೆಗಾಗಿ ಕೇವಲ ರಸ್ತೆಗಳನ್ನು ನಿರ್ಮಿಸಿ ಜನರ ಕಣ್ಣಿಗೆ ಮಣ್ಣೆರಚಿದ್ದಾರೆ.
ನಗರದಲ್ಲಿ ಆಟೋ ರಿಕ್ಷಾ ಚಾಲಕರಿಗೆ ಸರಿಯಾದ ರಿಕ್ಷಾ ಸ್ಟ್ಯಾಂಡ್ ಗಳಿಲ್ಲ ಚಾಲಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಶೌಚಾಲಯ ಇಲ್ಲ ಹೀಗೆ ನಗರದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಆರೋಪಿಸಿದರು. ವೋಟ್ ಕೇಳಲು ಬರುವಾಗ ಕಾಂಗ್ರೆಸ್ ನವರು ಬಿಜೆಪಿ ಏನು ಅಭಿವೃದ್ಧಿ ಮಾಡಿದೆ ಎಂದು ಪ್ರಶ್ನೆ ಮಾಡುತ್ತಾರೆ, ಬಿಜೆಪಿ ಯವರು ಕಾಂಗ್ರೆಸ್ ನವರು ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಜನರನ್ನು ಮರುಳು ಮಾಡಿದ್ದಾರೆ ಹಾಗಾಗಿ ಈ ಬಾರಿ ಪರ್ಯಾಯವಾಗಿ ಜೆಡಿಎಸ್ ಅಭ್ಯರ್ಥಿ ಯಾದ ನನಗೆ ಮತ ನೀಡಿ ಗೆಲ್ಲಿಸಿಕೊಟ್ಟು ಅಭಿವೃದ್ಧಿ ಎಂದರೆ ಏನೆಂಬುದನ್ನು ತೋರಿಸುತ್ತೇನೆ ಎಂದು ಮತ ಯಾಚನೆ ನಡೆಸಿದರು. ಈ ಸಂಧರ್ಭದಲ್ಲಿ ಜೆಡಿಎಸ್ ಪುತ್ತೂರು ತಾಲೂಕು ಅಧ್ಯಕ್ಷರಾದ ಅಶ್ರಫ್ ಕಲ್ಲೇಗ, ರಾಜ್ಯ ಜೆಡಿಎಸ್ ವಕ್ತಾರೆ ಶ್ರೀಮತಿ ಜೋಹರ ನಿಸಾರ್ ಅಹ್ಮದ್ ಮತ್ತಿತರು ಉಪಸ್ಥಿತರಿದ್ದರು.