ಮದ್ಯಾಹ್ನ ಸೇರ್ಪಡೆ ಸಂಜೆ ಟಿಕೆಟ್: ಪುತ್ತೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ದಿವ್ಯ ಪ್ರಭಾ ಗೌಡ
ಇಂದು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ದಿವ್ಯಾಪ್ರಭಾ ಗೌಡ ಚಿಲ್ತಡ್ಕರವರಿಗೆ ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಜೆಡಿಎಸ್ ಟಿಕೆಟ್ ಘೋಷಿಸಿದೆ.
ಇಂದು ಮದ್ಯಾಹ್ನ ಜೆಡಿಎಸ್ ಸೇರಿದ ದಿವ್ಯಪ್ರಭಾ ಅವರಿಗೆ ಸಂಜೆ ವೇಳೆ ಜೆಡಿಎಸ್ ಟಿಕೆಟ್ ಸಿಕ್ಕಿದೆ. ಆ ಮೂಲಕ ಕೆಲವೇ ಗಂಟೆಗಳಲ್ಲಿ ಟಿಕೆಟ್ ಗಿಟ್ಟಿಸಿಕೊಂಡಂತಾಗಿದೆ.
ಈಗಾಗಲೇ ಜೆಡಿಎಸ್ ನಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸ್ಥಾನಕ್ಕೆ ಅಶ್ರಫ್ ಕಲ್ಲೇಗ ಅವರು ಆಕಾಂಕ್ಷಿಯಾಗಿದ್ದರು. ಅಲ್ಲದೆ ಜೆಡಿಎಸ್ ನ ಹಿರಿಯ ನಾಯಕ ಸಯ್ಯದ್ ಮೀರಾ ಸಾಹೇಬ್ ಅವರು ಕೂಡ ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಪುತ್ತೂರಿನಲ್ಲಿ ಜೆಡಿಎಸ್ ಬಾವುಟವನ್ನು ಹಾರಿಸುತ್ತೇವೆ, ಜೆಡಿಎಸ್ ನ ಶಕ್ತಿ ತೋರಿಸುತ್ತೇವೆ ಎಂದು ದಿವ್ಯ ಪ್ರಭಾ ಗೌಡ ಹೇಳಿದ್ದಾರೆ.