ಕರ್ನಾಟಕ ವಿಧಾನಸಭೆ ಚುನಾವಣೆ: ಸಿ–ವೋಟರ್ ಸಮೀಕ್ಷೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ
ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಚುನಾವಣಾ ಪೂರ್ವ ಸಮೀಕ್ಷೆ ಕೂಡಾ ಹೊರಬಿದ್ದಿದೆ.
ಎಬಿಪಿ ಸಿ–ವೋಟರ್ ಸಮೀಕ್ಷೆಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಗಲಿದೆ ಎಂದು ಹೇಳಲಾಗಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ 224 ಸ್ಥಾನಗಳಲ್ಲಿ
ಕಾಂಗ್ರೆಸ್ –115 – 127
ಬಿಜೆಪಿ– 68 – 80
ಜೆಡಿಎಸ್ –23 – 35 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಿ–ವೋಟರ್ ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ.
ಇನ್ನು ಮುಖ್ಯಮಂತ್ರಿ ಪರವಾಗಿ
ಸಿದ್ದರಾಮಯ್ಯ– ಶೇ 39.1, ಬಸವರಾಜ ಬೊಮ್ಮಾಯಿ – ಶೇ 31.1, ಕುಮಾರಸ್ವಾಮಿ– ಶೇ 21.4 ಹಾಗೂ
ಡಿ.ಕೆ.ಶಿವಕುಮಾರ್ –ಶೇ 3.2 ಒಲವು ವ್ಯಕ್ತವಾಗಿದೆ.
ನಗರ ಪ್ರದೇಶದ ಮತದಾರರು ಚಿತ್ತ ಕಾಂಗ್ರೆಸ್‌ನತ್ತ
ನಗರ ಪ್ರದೇಶದಲ್ಲಿ ಬಿಜೆಪಿ 11-15 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ. ಕಾಂಗ್ರೆಸ್ 15-19 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ಶೇ 46 ರಷ್ಟು ಮತಗಳನ್ನು ಗಳಿಸುವ ಸಾಧ್ಯತೆಯಿದ್ದು ಕಾಂಗ್ರೆಸ್ ಶೇ 41ರಷ್ಟು ಮತದಾರರ ಬೆಂಬಲ ಪಡೆಯುತ್ತದೆ ಎಂದು ಅಂದಾಜಿಸಲಾಗಿದೆ.