ಫೆ.22, 23: ಕಾವು ಬದ್ರಿಯ್ಯ ಮಜ್ಲಿಸ್ ದಶವಾರ್ಷಿಕ ಸನದುದಾನ ಮಹಾ ಸಮ್ಮೇಳನ
ಪುತ್ತೂರು: ಬದ್ರಿಯ್ಯ ಎಜ್ಯುಕೇಶನ್ ಸೆಂಟರ್ ಕಾವು ಇದರ ದಶ ವಾರ್ಷಿಕ ಸನದುದಾನ ಮಹಾ ಸಮ್ಮೇಳನ, ಸಯ್ಯದ್ ಮುಹಮ್ಮದ್ ಹದ್ದಾದ್ ತಂಙಳ್‌ರವರ 4ನೇ ಆಂಡ್ ನೇರ್ಚೆ ಹಾಗೂ ಹಿಫ್ಲುಲ್ ಖುರ್‌ಆನ್ ಮತ್ತು ದಅವಾ ಸೆಂಟರ್ ಶಿಲಾನ್ಯಾಸ ಕಾರ್ಯಕ್ರಮ ಫೆ.22 ಮತ್ತು ಫೆ.23ರಂದು ನಡೆಯಲಿದೆ.
ಫೆ.22ರಂದ ಮದ್ಯಾಹ್ನ ಗಂಟೆ 3-00ಕ್ಕೆ ಕಾವು ಬದ್ರಿಯ್ಯ ಎಜು ಸೆಂಟರ್‌ನ ಚೇರ್‌ಮೆನ್ ಸಯ್ಯದ್ ಫಕ್ರುದ್ದೀನ್ ಹದ್ದಾದ್ ತಂಙಳ್ ನೇತೃತ್ವದಲ್ಲಿ ನಡೆಯುವ ಧ್ವಜಾರೋಹಣವನ್ನು ಸಮ್ಮೇಳನದ ಸ್ವಾಗತ ಸಮಿತಿ ಫೈನಾನ್ಸಿಯಲ್ ಸೆಕ್ರೇಟರಿ ಅಬ್ದುರ್ರಹ್ಮಾನ್ ಶಾಲಿಮಾರ್ ನೆರವೇರಿಸಲಿದ್ದಾರೆ. ಹಲವು ಗಣ್ಯರು ಭಾಗವಹಿಸಲಿದ್ದಾರೆ.
ರಾತ್ರಿ ಗಂಟೆ 7-00ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಅಲ್ ಬುಖಾರಿ ಎಣ್ಮೂರು ದುವಾ ನಿರ್ವಹಿಸಲಿದ್ದಾರೆ. ಕುಂಬ್ರ ಮರ್ಕಝುಲ್ ಹುದಾದ ಕಾರ್ಯಾಧ್ಯಕ್ಷ ಎಸ್.ಎಂ ಬಶೀರ್ ಹಾಜಿ ಕುಂಬ್ರ ಅಧ್ಯಕ್ಷತೆ ವಹಿಸಲಿದ್ದು ಇಬ್ರಾಹಿಂ ಸಅದಿ ಮಾಣಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಝರುದ್ದೀನ್ ರಬ್ಬಾನಿ ಕಲ್ಲೂರ್ ಮತ್ತು ಸಂಗಡಿಗರಿಂದ ಬುರ್ದಾ ಮಜ್ಲಿಸ್ ನಡೆಯಲಿದ್ದು ಸಯ್ಯದ್ ಹದ್ದಾದ್ ತಂಙಳ್ ಮತ್ತು ಸಯ್ಯದ್ ಮುಝಮ್ಮಿಲ್ ತಂಙಳ್ ಕಾಸರಗೋಡು ನೇತೃತ್ವದಲ್ಲಿ ಬದ್ರಿಯ್ಯ ಮಜ್ಲಿಸ್ ನಡೆಯಲಿದೆ. ರಫೀಕ್ ಸಅದಿ ದೇಲಂಪಾಡಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.
ಫೆ.23ರಂದು ಬೆಳಿಗ್ಗೆ ಖತ್ಮುಲ್ ಖುರ್‌ಆನ್ ಮಜ್ಲಿಸ್ ನಡೆಯಲಿದೆ. ಸಂಜೆ ಗಂಟೆ 4-00ಕ್ಕೆ ಸಾಂಘಿಕ ಶಿಬಿರ ನಡೆಯಲಿದ್ದು ಸಯ್ಯದ್ ಹಸನುಲ್ ಅಹ್ದಲ್ ತಂಙಳ್ ದುವಾ ನಿರ್ವಹಿಸಲಿದ್ದಾರೆ. ಸಯ್ಯದ್ ಹದ್ದಾದ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದು ಉಡುಪಿ ಚಿಕ್ಕಮಗಳೂರು ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉದ್ಘಾಟಿಸಲಿದ್ದಾರೆ. ಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಶಿಲಾನ್ಯಾಸ ನೆರವೇರಿಸಲಿದ್ದು ಅನಸ್ ಅಮಾನಿ ಪುಷ್ಪಗಿರಿ ತರಗತಿ ನಡೆಸಲಿದ್ದಾರೆ.
ಮಗ್ರಿಬ್ ನಮಾಜಿನ ಬಳಿಕ ನಡೆಯುವ ಸಮಾರೋಪ ಸಮ್ಮೇಳದಲ್ಲಿ ಸಯ್ಯದ್ ಕುಂಞಿಕೋಯ ತಂಙಳ್ ಸುಳ್ಯ ದುವಾ ನಿರ್ವಹಿಸಲಿದ್ದು ಹುಸೈನ್ ಸಅದಿ ಕೆ.ಸಿ ರೋಡ್ ಉದ್ಘಾಟಿಸಲಿದ್ದಾರೆ. ಸಯ್ಯದ್ ಹದ್ದಾದ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದು ಸಯ್ಯದ್ ಹಸನುಲ್ ಅಹ್ದಲ್ ತಂಙಳ್ ಸನದುದಾನ ನಿರ್ವಹಿಸಲಿದ್ದಾರೆ. ಸಯ್ಯದ್ ಝೈನುದ್ದೀನ್ ಅಲ್ ಬುಖಾರಿ ತಂಙಳ್ ಕೂರಿಕ್ಕುಝಿಯವರು ದುವಾ ಮತ್ತು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.