ಪುತ್ತೂರು: ಮಗಳ ಮದುವೆಗೆ ದುಡ್ಡಿಲ್ಲದೇ ದಾನಿಗಳ ನೆರವಿಗಾಗಿ ಅಂಗಲಾಚುತ್ತಿರುವ ಕುಟುಂಬ
ಪುತ್ತೂರು: ಒಂದು ಕಡೆ ಕಿತ್ತು ತಿನ್ನುವ ಬಡತನ ಇನ್ನೊಂದು ಕಡೆ ಮಗಳನ್ನು ಮದುವೆ ಮಾಡಿಕೊಡಬೇಕಾದ ಸನ್ನಿವೇಶ ಮೊದಲೇ ವಾಸಿಸಲು ಸ್ವತಂತ ಮನೆಯಿಲ್ಲ. ಇರುವ ಬಾಡಿಗೆ ಮನೆಗೂ ಸರಿಯಾಗಿ ಬಾಡಿಗೆ ಕೊಡಲು ಸಾಧ್ಯವಾಗದ ಪರಿಸ್ಥಿತಿ ಇಂತಹ ಶೋಚನೀಯ ಪರಿಸ್ಥಿತಿಯಲ್ಲಿ ಕಣ್ಣೀರಿಡುತ್ತಿರುವ ಕುಟುಂಬವೊಂದು ಪುತ್ತೂರು ತಾಲೂಕಿನ ಮುಕ್ವೆ ಜಮಾಅತಗೊಳಪಟ್ಟ ಪಂಜಳದಲ್ಲಿದೆ.

ಮನೆಯ ಯಜಮಾನನ ಹೆಸರು ಹಮೀದ್ ಕೆ.ಎಂ. ಮೂಲತ: ಮಾಡಾವು ನಿವಾಸಿಯಾಗಿರುವ ಇವರು ಕಳೆದ ಲ ವರ್ಷಗಳಿಂದ ಪಂಜಳದಲ್ಲಿ ಸಣ್ಣ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ, ಇವರಿಗೆ ಇಬ್ಬರು ಮಕ್ಕಳು ಹಿರಿಯ ಮಗಳನ್ನು ಈಗಾಗಲೇ ಮದುವೆ ಮಾಡಿ ಕೊಟ್ಟಿದೆ ಪಂದಳದ ಮನೆಯಲ್ಲಿ ಪತ್ನಿ ಮತ್ತು ಕಿರಿಯ ಪುತ್ರಿಯೊಂದಿಗೆ ಹಮೀದ್ ಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಇದೀಗ ಕಿರಿಯ ಮಗಳಿಗೆ ಮಾರ್ಚ್ 5 ರಂದು ಮದುವೆ ನಡೆಸುವುದೆಂದು ದಿನಾಂಕ ನಿಗದಿಯಾಗಿದೆ.
ಮದುವೆಗೆ ಸಾಕಷ್ಟು ಖಚರ್ಯ ವೆಟ್ಟುಗಳಿದ್ದು ಮಗಳ ಮದುವೆ ಕಾರ್ಯವನ್ನು ಹೇಗೆ ನರವೇರಿಸುವುದು ಎನ್ನುವ ಚಿಂತೆಯಲ್ಲಿ ಹಮೀದ್ ದಂಪತಿ ಕಣ್ಣೀರು ಸುರಿಸುತ್ತಿದ್ದಾರೆ.
ಹಮೀದ್ ಅವರಿಗೆ 50 ವರ್ಷ ವಯಸ್ಸು, ಆರೋಗ್ಯ-ವೂ ಸರಿಯಿಲ್ಲ. ಸಣ್ಣ ಪುಟ್ಟ ಕೂಲಿ ಕೆಲನ ಮಾಡಿ ಹಗೋ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇದೀಗ ಮಗಳ ಮದುವೆಗೆ ದಿನ ಹತ್ತಿರ ಬರುತ್ತಿದ್ದು ಅನ್ಯ ದಾರಿ ಕಾಣದೇ ಕೊರಗುತ್ತಿದ್ದಾರೆ. ದಾನಿಗಳ ಸಹಾಯ ಯಾಚಿಸಿದ್ದಾರೆ.
ಸಹೃದಯಿ ದಾನಿಗಳು ಮನಸ್ಸು ಮಾಡಿದರೆ ನೊಂದು ಕಣ್ಣೀರು ಸುರಿಸುತ್ತಿರುವ ಕುಟುಂಬವೊಂದರ ಕಣ್ಣೀರೊರೆಸಲು ಸಾಧ್ಯವಿದೆ.

ಮಗಳ ಮದುವೆಗೆ ನಯಾ ಪೈಸೆ ಕೈಯಲ್ಲಿ ಇಲ್ಲದೇ ಕೊರಗುತ್ತಿರುವ ಹಮೀದ್ ಕುಟುಂಬಕ್ಕೆ ನೆರವು ನೀಡುವವರು ಮೇಲೆ ಕೊಟ್ಟಿರುವ ಬ್ಯಾಂಕ್ ಖಾತೆಗೆ ಅಥವಾ Gpay/Phonepeಗೆ ತಮ್ಮಿಂದಾಗುವ ಧನ ಸಹಾಯವನ್ನು ಮಾಡಬಹುದಾಗಿದೆ.