ಕುಂಬ್ರ: ಜೀಪು-ಸ್ಕೂಟರ್ ನಡುವೆ ಅಪಘಾತ, ಸ್ಕೂಟರ್ ಸವಾರಗೆ ಗಾಯ; ಪಾದಾಚಾರಿ ಮಹಿಳೆಗೂ ಗಾಯ
ಪುತ್ತೂರು: ಜೀಪು ಮತ್ತು ಸ್ಕೂಟರ್ ನಡುವೆ ಕುಂಬ್ರದಲ್ಲಿ ಅಪಘಾತ ಸಂಭವಿಸಿ ಸ್ಕೂಟರ್ ಸವಾರ ಗಾಯಗೊಂಡ ಘಟನೆ ಸೋಮವಾರ ಮದ್ಯಾಹ್ನ ನಡೆದಿದೆ.

ಪುತ್ತೂರಿನಿಂದ ಸುಳ್ಯಕ್ಕೆ ತೆರಳುತ್ತಿದ್ದ ಜೀಪು ಹಾಗೂ ಕೌಡಿಚ್ಚಾರ್ನಿಂದ ಕುಂಬ್ರಕ್ಕೆ ಬರುತ್ತಿದ್ದ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ. ಕುಂಬ್ರ ಜಂಕ್ಷನ್ನಲ್ಲಿ ಸ್ಕೂಟರ್ ಸವಾರ ರಿಕ್ಷಾ ಪಾರ್ಕಿಂಗ್ಗೆ ತನ್ನ ಸ್ಕೂಟರ್ ತಿರುಗಿಸುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಜೀಪಿಗೆ ಡಿಕ್ಕಿ ಹೊಡೆದಿದೆ.
ಸ್ಕೂಟರ್ ಸವಾರನಿಗೆ ಅಲ್ಪ ಗಾಯಗಳಾಗಿದೆ. ಡಿಕ್ಕಿಯನ್ನು ತಪ್ಪಿಸುವ ಭರದಲ್ಲಿ ಜೀಪು ಚಾಲಕ ತನ್ನ ವಾಹನವನ್ನು ರಸ್ತೆ ಬದಿಗೆ ಇಳಿಸಿದ್ದು ಈ ವೇಳೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವರಿಗೆ ಜೀಪು ತಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.