ಕರಾವಳಿಕ್ರೀಡೆ

ಸುಳ್ಯ: ಸ್ಥಳೀಯ ಕ್ರಿಕೆಟ್ ಪಂದ್ಯಾಟದಲ್ಲಿ ಮಿಂಚಿದ ವಿಕಲಚೇತನ ಯುವಕ ಉನೈಸ್ ಪೈಚಾರ್ ರವರಿಗೆ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನ



ಕ್ರೀಡೆಗೆ ಅಂಗವೈಕಲ್ಯತೆ ಅಡ್ಡಿಯಲ್ಲ ಎಂಬುದನ್ನು ಸ್ಥಳೀಯ ಕ್ರಿಕೆಟ್ ಪಂದ್ಯಾಟದಲ್ಲಿ ತೋರಿಸಿಕೊಡುತ್ತಿರುವ ಸುಳ್ಯ ಪೈಚಾರು ಭಾಗದ ಯುವಕ ಉನೈಸ್ ಎಂಬುವರಿಗೆ ಪೈಚಾರು ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಗಿದೆ.



ಫೆಬ್ರವರಿ 5 ರಂದು ಸುಳ್ಯದ ಶಾಂತಿನಗರ ಕ್ರೀಡಾಂಗಣದಲ್ಲಿ ನಡೆದ ಫ್ರೆಂಡ್ಸ್ ಫಾರ್ ಹೆವರ್ ವತಿಯಿಂದ ಓಲ್ಡ್ ಇಸ್ ಗೋಲ್ಡ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು.



ಈ ಪಂದ್ಯಾಟದಲ್ಲಿ ಉನೈಸ್ ಭಾಗವಹಿಸಿ ಅವರ ಎರಡು ಮೊಣಕಾಲು ಮತ್ತು ಪಾದಗಳು ಸಂಪೂರ್ಣ ಅಂಗವೈಕಲ್ಯತೆಯನ್ನು ಹೊಂದಿದ್ದರು ಇತರ ಸಾಮಾನ್ಯ ಯುವಕರೊಂದಿಗೆ ಅವರಿಗೆ ಸಮಾನವಾಗಿ ಮೈದಾನದಲ್ಲಿ ಕ್ರಿಕೆಟ್ ಆಟದ ಪ್ರತಿಯೊಂದು ವಿಭಾಗದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ಇತರರಿಗೆ ಮಾದರಿಯಾಗಿದ್ದಾರೆ.



ಅವರ ಕ್ರೀಡೆಯನ್ನು ಗುರುತಿಸಿ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಪೈಚಾರ್ ಇದರ ಅಧ್ಯಕ್ಷರಾದ ಡಾlಬಶೀರ್ ಆರ್‌ ಬಿ ರವರು ತಮ್ಮ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅವರನ್ನು ಸನ್ಮಾನಿಸಿದ್ದಾರೆ.



ಈ ಸಂದರ್ಭದಲ್ಲಿ ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯ ಮುಜೀಬ್ ಪೈಚಾರ್,ಪೈಚಾರ್ ಅಲ್ ಅಮೀನ್ ಯೂತ್ ಕ್ಲಬ್ ಅಧ್ಯಕ್ಷ ಅಬುಸಾಲಿ,ಸುಳ್ಯ ಬೇಬಿ ಝೋನ್ ಮಾಲಕ ಅನೀಫ್ ಅಲ್ಫಾ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!