ಕಾರಿನಡಿಯಲ್ಲಿ ಸಿಲುಕಿದ್ದ ಬೈಕ್ ಸವಾರನನ್ನು 12 ಕಿ.ಮೀ ಎಳೆದೋಯ್ದ ಪ್ರಕರಣ: ಆರೋಪಿ ಅರೆಸ್ಟ್
ಕಾರು ಮತ್ತು ಬೈಕ್ ಅಪಘಾತದ ಬಳಿಕ ಕಾರಿನಡಿಯಲ್ಲಿ ಸಿಲುಕಿದ್ದ ಬೈಕ್ ಸವಾರನನ್ನು 12 ಕಿ.ಮಿ ದೂರ ಎಳೆದೊಯ್ದು ಕೊಲೆ ಮಾಡಿದ ಚಾಲಕನನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.
ಸೂರತ್ನ ಪಾಲ್ಸಾನ ಎಂಬಲ್ಲಿ ಘಟನೆ ನಡೆದಿದ್ದು, ಇದೀಗ ಆರೋಪಿಯ ಬಂಧನವಾಗಿದೆ.

ಕಟ್ಟಡ ನಿರ್ಮಾಣ ಕ್ಷೇತ್ರದ ಉದ್ಯಮಿಯಾಗಿರುವ ಬಿರೇನ್ ಲಾಡುಮೋರ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಘಟನೆ ಬಳಿಕ ಆರೋಪಿ ಮುಂಬೈ ಹಾಗೂ ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ.
ದಂಪತಿಗಳು ಪ್ರಯಾಣಿಸುತ್ತಿದ್ದ ಬೈಕ್ಗೆ ಕಾರು ಗುದ್ದಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಸಾಗರ್ ಪಾಟೀಲ್ ಅವರನ್ನು 12 ಕಿ.ಮಿ ದೂರಕ್ಕೆ ಎಳೆದುಕೊಂಡು ಹೋಗಲಾಗಿದೆ. ಪತ್ನಿಯ ಮೃತದೇಹ ಸಿಕ್ಕ 12 ಕಿ.ಮಿ ದೂರದಲ್ಲಿ ಪತಿಯ ಮೃತದೇಹ ಲಭಿಸಿತ್ತು.