ಸುಳ್ಯ: ಮಾದಕ ವಸ್ತುಗಳ ಸೇವೆನೆ ವಿರುದ್ಧ ಎಸ್ ಜೆ ಎಂ, ಎಸ್‌ಬಿಎಸ್ ವತಿಯಿಂದ ಜಾಗೃತಿ ಜಾಥಾ
ಜನವರಿ 21ರಂದು ರಾಜ್ಯದಾದ್ಯಂತ ಎಸ್ ಜೆ ಎಂ ವತಿಯಿಂದ ಆಯೋಜಿಸಲಾಗಿದ್ದ ಮಾದಕ ವ್ಯಸನಗಳ ವಿರುದ್ಧದ ಜಾಗೃತಿ ಅಭಿಯಾನದ ಜಾಥಾ ಕಾರ್ಯಕ್ರಮ ಇಂದು ಸುಳ್ಯದಲ್ಲಿ ನಡೆಯಿತು.
‘ಲಹರಿಯ ಆವೇಶ ಸಮಾಜದ ವಿನಾಶ, ಸ್ವಸ್ಥ ಸಮಾಜವನ್ನು ವಿನಾಶಕ್ಕೆ ತಳ್ಳುತ್ತಿರುವ ಲಹರಿ ಪದಾರ್ಥಗಳ ವಿರುದ್ಧ ಎಸ್ ಬಿ ಎಸ್ ಬಾಲ ಮಸೀರ ಎಂಬ ಕಾರ್ಯಕ್ರಮದೊಂದಿಗೆ ರ್ಯಾಲಿ ಹಾಗೂ ಸಂದೇಶ ಭಾಷಣವನ್ನು ಹಮ್ಮಿಕೊಳ್ಳಲಾಗಿತ್ತು.
ಮೊಗರ್ಪಣೆ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ನಡೆಸಿ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಮೊಗರ್ಪಣೆ ಜುಮಾ ಮಸೀದಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್, ಸ್ಥಳೀಯ ಮುದರಿಸ್ ಹಾಫಿಲ್ ಸೌಕತ್ ಅಲಿ ಸಕಾಫಿ, ಸುಳ್ಯ ರೇಂಜ್ ಎಸ್ ಜೆ ಎಂ ಅಧ್ಯಕ್ಷ ಮಹಮ್ಮದ್ ಸಕಾಫಿ, ಸುಳ್ಯ ರೇಂಜ್ ಎಸ್ ಎಂ ಎ ಅಧ್ಯಕ್ಷ ಹಮೀದ್ ಬೀಜ ಕೊಚ್ಚಿ, ಎಸ್ ಜೆ ಎಂ ರಾಜ್ಯ ಸಮಿತಿ ಮುಖಂಡ ಇಬ್ರಾಹಿಂ ಸಕಾಫಿ ಪುಂಡೂರು ರ್ಯಾಲಿಗೆ ಚಾಲನೆ ನೀಡಿದರು.
ಸುಳ್ಯ ತಾಲೂಕಿನ ವಿವಿಧ ಭಾಗಗಳ 20ಕ್ಕೂ ಹೆಚ್ಚು ಮದರಸಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಿ ನಗರದ ಉದ್ದಕ್ಕೂ ಮಾದಕ ವ್ಯಸನಗಳ ಜಾಗೃತಿ ಕುರಿತು ಘೋಷಣೆಯನ್ನು ಕೂಗಿದರು.
ಗಾಂಧಿನಗರ ಪೆಟ್ರೋಲ್ ಬಂಕ್ ಮುಂಬಾಗ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆದು ಮುಕ್ತಾರ್ ಹಿಮಮಿ ಸಕಾಫಿ ಮೇನಾಲರವರಿಂದ ಜಾಗೃತಿ ಸಂದೇಶ ಭಾಷಣ ನಡೆಯಿತು.
ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿಎಂ ಶಹೀದ್, ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಸಂಘಟಕರಾದ ಲತೀಫ್ ಸಕಾಫಿ ಗೂನಡ್ಕ, ಮಹಮ್ಮದ್ ಅಲಿ ಸಕಾಫಿ ಗೂನಡ್ಕ, ನಿಸಾರ್ ಸಕಾಪಿ ಮುಡೂರು, ಅಬ್ದುಲ್ ಕರೀಂ ಸಕಾಫಿ ಜಯನಗರ, ಸಿದ್ದೀಕ್ ಕಟ್ಟೆಕ್ಕಾರ್ಸ್ ಸೇರಿದಂತೆ ನೂರಾರು ಮದರಸ ಅಧ್ಯಾಪಕರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.