ಸುಳ್ಯ: ಅಯ್ಯಪ್ಪ ಮಾಲಾಧಾರಿ ಪುಟಾಣಿ ಸ್ವಾಮಿಯ ಕೈ ಹಿಡಿದು ನಡೆದ ಇಬ್ರಾಹಿಂ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಸುಳ್ಯ: ಕಲ್ಲುಗುಂಡಿ ಸಮೀಪ ಇಂದು ಬೆಳಿಗ್ಗೆ ಶ್ರೀ ಅಯ್ಯಪ್ಪ ಮಾಲಾಧಾರಿ ಪುಟಾಣಿ ಸ್ವಾಮಿಯ ಕೈ ಹಿಡಿದು ಹಣ್ಣಿನ ಅಂಗಡಿಗೆ ಕರೆದುಕೊಂಡು ಹೋಗಿ ಹಣ್ಣು ಹಂಪಲನ್ನು ನೀಡಿ ಇಬ್ರಾಹಿಂ ಮೈಲಿಕಲ್ಲು ಎಂಬವರು ಪ್ರೀತಿಯಿಂದ ಉಪಚರಿಸಿದ್ದು ಇದೀಗ ಅವರ ಫೋಟೋ ವೈರಲ್ ಆಗಿದೆ.

ಇದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗೆ ಕಾರಣವಾಗಿದ್ದು ಇದರ ಬಗ್ಗೆ ಉತ್ತಮ ಸಂದೇಶಗಳು ರವಾನೆಗೊಳ್ಳುತ್ತಿದೆ.

ನಾಗರಿಕ ಸಮಾಜದಲ್ಲಿ ಇಂತಹ ಸೌಹಾರ್ದತೆ ಎಂದೆಂದೂ ನೆಲೆಗೊಳ್ಳಬೇಕು ಎಂಬ ಅಭಿಪ್ರಾಯ ನೆಟ್ಟಿಗರಿಂದ ವ್ಯಕ್ತವಾಗಿದೆ.