‘ಲಿಂಗ ಪರಿವರ್ತನೆ’ಯ ವ್ಯವಸ್ಥಿತ ಜಾಲಕ್ಕೆ ಬಲಿಯಾಗುತ್ತಿದ್ದಾರೆಯೇ ದ.ಕ ಜಿಲ್ಲೆಯ ಯುವಕರು..?
ಮಂಗಳೂರು: ಜಿಲ್ಲೆಯಾದ್ಯಾಂತ ಅಲ್ಲಲ್ಲಿ ಮಧ್ಯಮ ವಯಸ್ಸಿನ ಹುಡುಗರು ದಿಢೀರಣೆ ಕಾಣೆಯಾಗುತ್ತಾರೆ. ಅಥವಾ ಬೆಂಗಳೂರು, ಮೈಸೂರು, ಇನ್ನಿತರ ಕಡೆಗಳಿಗೆ ಕೆಲಸಕ್ಕೆ ಹೋದವರು ಮತ್ತೆ ಸಂಪರ್ಕಕ್ಕೆ ಸಿಗುತ್ತಿಲ್ಲ,ಇಲ್ಲಾ ಕಾಣೆಯಾಗಿದ್ದಾರೆ. ಈ ರೀತಿಯ ಸುದ್ದಿಗಳು ದಿನ ದಿನೇ ಬರುತ್ತಾ ಇರುತ್ತವೆ.

ಅದು ಪತ್ರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತದೆ. ಕೊನೆಗೆ ಪೋಲೀಸ್ ದೂರು ಕೊಟ್ಟು ಐದಾರು ತಿಂಗಳುಗಳ ಕಾಲ ಆ ವಿಚಾರವಾಗಿ ಯಾವುದೇ ಮಾಹಿತಿ ಯಾರಿಗೂ ಸಿಗುವುದಿಲ್ಲ, ತಿಂಗಳುಗಳ ಬಳಿಕ ಅವರು ನಮಗೆಲ್ಲ ಕಾಣಸಿಗುವುದು ತೃತೀಯ ಲಿಂಗದವರ ರೂಪದಲ್ಲಿ. ಈ ರೀತಿ ಕಾಣೆಯಾದವರನ್ನು ಪತ್ತೆಹಚ್ಚುವ ಸಮಯದಲ್ಲಿ ಅವರು ಸಂಪೂರ್ಣ ಅವರ ವೇಷ, ಭೂಷಣ,ತಮ್ಮ ಹಳೇ ಮಾತುಗಾರಿಕೆ, ನಡವಳಿಕೆ ಎಲ್ಲವೂ ಬದಲಾಗಿರುವ ಬಗ್ಗೆ ವರದಿಯಾಗಿವೆ.
ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಒಬ್ಬ ಯುವಕ ಮೆಲ್ಕಾರಿ ಆಸುಪಾಸಿನ ಒಂದು ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದು ಮದುವೆ ಆಗಿ ಒಂದು ಮಗು ಆದ ಬಳಿಕ ಹೆಂಡತಿಗೆ ಡೈವರ್ಸ್ ನೀಡಿ ಹೋದವನು ತೃತೀಯ ಲಿಂಗವಾಗಿ ಬದಲಾಗಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ.
ಲಿಂಗ ಪರಿವರ್ತನೆಗೆ ಒಳಗಾಗಿದ್ದಾನೆ ಎನ್ನಲಾದ ದ. ಕ ಜಿಲ್ಲೆಯ ಯುವಕನೊಬ್ಬ ಆತನ ಕುಟುಂಬಸ್ಥರ ಜೊತೆ ಫೋನ್ ಮೂಲಕ ಮಾತನಾಡುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೈರಲ್ ಆಡಿಯೋದಲ್ಲಿನ ಮಾತುಕತೆ ಯಾವಾಗ ಮಾತನಾಡಿದ್ದು ಎಂದು ತಿಳಿದು ಬಂದಿಲ್ಲ. ಅದರಲ್ಲಿ ಆತ ತಾನು ಲಿಂಗ ಪರಿವರ್ತನೆಗೆ ಒಳಗಾಗಿರುವ ಬಗ್ಗೆ ಮಾತನಾಡಿದ್ದ.

ಈ ಜಾಲವನ್ನು ಬೆನ್ನಟ್ಟಲು ಈಗಾಗಲೇ ಒಂದು ತಂಡ ಮಂಗಳೂರು, ಬೆಂಗಳೂರು, ಮೈಸೂರಾದ್ಯಾಂತ ಕಾರ್ಯಚರಿಸುತ್ತಿದೆ ಎನ್ನಲಾಗಿದೆ. ಯಾಕೆ ಯುವಕರು ತೃತೀಯ ಲಿಂಗಕ್ಕೆ ಬದಲಾವಣೆ ಆಗುತ್ತಿದ್ದಾರೆ, ಹೇಗೆ ಹೋಗುತ್ತಿದ್ದಾರೆ, ಏನು ಇದರಲ್ಲಿ ಅವರಿಗೆ ಲಾಭ ಇತ್ಯಾದಿ ಮಾಹಿತಿಗಳನ್ನು ಈಗಾಗಲೆ ಕಲೆ ಹಾಕಿದ್ದು, ಈ ಜಾಲದಲ್ಲಿರುವ ಕಾಣದ ಕೈಗಗಳನ್ನು ಪತ್ತೆ ಹಚ್ಚುವ ಎಲ್ಲಾ ತಯಾರಿ ನಡೆಯುತ್ತಿದೆ ಎನ್ನಲಾಗಿದೆ.
ಅಚ್ಚರಿಯ ವಿಷಯ ಏನೆಂದರೆ ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ತೃತೀಯ ಲಿಂಗದ ಸರ್ಜರಿ ನಡೆಯುತ್ತದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿದ್ದು ಇದು ನಿಜವೇ ಎನ್ನುವುದು ಗೊತ್ತಾಗಿಲ್ಲ. ಬೆಂಗಳೂರಿನಲ್ಲಿ ಲಿಂಗ ಪರಿವರ್ತನೆ ಮಾಡಲಾಗುತ್ತಿದೆ ಎನ್ನುವ ಮಾತುಗಳು ದಟ್ಟವಾಗಿ ಕೇಳಿ ಬಂದಿದೆ.
ತೃತೀಯ ಲಿಂಗಕ್ಕೆ ಬದಲಾವಣೆ ಆಗುವಾಗ ಮಾತಾ ಪೂಜೆ ಎಂಬ ತಿಂಗಳ ಪೂಜೆ ಇದೆಯಂತೆ. ಈ ಪೂಜೆ ಮುಗಿದ ಬಳಿಕ ಈ ತೃತೀಯ ಲಿಂಗ ಬದಲಾವಣೆಗಾಗಿ ಬ್ರೈನ್ ವಾಶ್ ಮಾಡಿ ಸ್ವತಹಃ ನಾನೇ ಲಿಂಗ ಬದಲಾವಣೆ ಮಾಡುವುದಾಗಿ ಒಪ್ಪಿಕೊಳ್ಳುವಂತೆ ಮಾಡಲಾಗಿ ಅವರಿಂದ ಸಹಿ ಪಡೆದುಕೊಂಡು, ಪುರಾವೆಯೊಂದಿಗೆ ಲಿಂಗ ಸರ್ಜರಿ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.

ಲಿಂಗ ಪರಿವರ್ತನೆ ಮಾಡಿಸಿಕೊಳ್ಳುವ ಯುವಕರಿಗೆ ಧಾರ್ಮಿಕ ಪ್ರಜ್ಞೆ ತೀರಾ ಕಡಿಮೆ ಇರುವುದರಿಂದ ಈ ಜಾಲಕ್ಕೆ ಸುಲಭವಾಗಿ ಬಲಿಯಾಗುತ್ತಿದ್ದಾರೆ. ಮತ್ತು ತಮ್ಮಲ್ಲಿ ಇರುವ ಅಲ್ಪ ಧಾರ್ಮಿಕ ಪ್ರಜ್ಞೆ ಕೂಡ ಕಳೆದುಕೊಂಡು ಅವರದೇ ಆದ ಧರ್ಮಕ್ಕೆ ಬದಲಾವಣೆಗೊಳ್ಳುತ್ತಿದ್ದಾರೆ. ಕೊನೆಗೆ ಇಲ್ಲಿ ಆತ ಆತನ ಧರ್ಮವನ್ನೇ ಕಳೆದುಕೊಂಡು ಬಿಡುತ್ತಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಜಾಲದ ಕುತಂತ್ರಕ್ಕೆ ಬಲಿಯಾದ ಯುವಕರ ಬಳಿ ಸ್ವಯಂ ಅವರ ಕೈಯಿಂದಲೇ ಲಿಖಿತ ಸಹಿ ಪಡೆದುಕೊಂಡು ಸರ್ಜರಿ ಮಾಡಿಸಿ ಇಷ್ಟು ದಿನಗಳವರೆಗೆ ಗಂಡಸರನ್ನು ನೋಡಬಾರದು ಎಂದು ಗೌಪ್ಯ ಸ್ಥಳಗಳಲ್ಲಿ ಕೂಡಿಹಾಕಿ ಇಂತಹ ದಂಧೆಗೆ ಇಳಿಸುತ್ತಿರುವುದು ಮತ್ತು ಮಂಗಳೂರು ಜಿಲ್ಲೆಯಲ್ಲಿ ವಿಶೇಷವಾಗಿ ಮುಸ್ಲಿಮ್ ಕಮ್ಯುನಿಟಿಯ ಹುಡುಗರು ಕಾಣೆಯಾಗುತ್ತಿರೋದು ಇದೇ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಈ ಜಾಲವನ್ನು ನಿಲ್ಲಿಸದೇ ಹೋದರೆ ಇನ್ನಷ್ಟು ಮಂದಿ ಇದಕ್ಕೆ ಬಲಿಯಾಗುವುದರಲ್ಲಿ ಸಂಶಯವಿಲ್ಲ. ಈ ಜಾಲವನ್ನು ನಿರ್ಣಾಮ ಮಾಡಬೇಕಾದ ಹೊಣೆ ನಾಗರಿಕ ಸಮಾಜದ್ದು ಮತ್ತು ಪೊಲೀಸ್ ಇಲಾಖೆಯದ್ದು.





