ಕ್ರಿಕೆಟಿಗ ರವೀಂದ್ರ ಜಡೇಜ ಪತ್ನಿ ರಿವಾಬಾ ಜಡೇಜಾಗೆ ಭರ್ಜರಿ ಗೆಲುವು
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಜಾಮ್‌ನಗರ (ಉತ್ತರ) ಕ್ಷೇತ್ರದಿಂದ ಸ್ಪರ್ಧಿಸಿರುವ ಕ್ರಿಕೆಟಿಗ ರವೀಂದ್ರ ಜಡೇಜ ಅವರ ಪತ್ನಿ, ಬಿಜೆಪಿ ಅಭ್ಯರ್ಥಿ ರಿವಾಬಾ ಜಡೇಜ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ರಿವಾಬಾ ಜಡೇಜ ಅವರು ತಮ್ಮ ಸ್ಪರ್ಧಿ ಆಮ್ ಆದ್ಮಿ ಪಕ್ಷದ ಕರ್ಸನ್ ಕರ್ಮುರ್ ಅವರನ್ನು 40,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದರು.
ಬಿಜೆಪಿ ತನ್ನ ಹಾಲಿ ಶಾಸಕ ಧಮೇಂದ್ರ ಸಿನ್ಹ ಜಡೇಜ ಅವರನ್ನು ಕೈಬಿಟ್ಟು ಜಡೇಜ ಪತ್ನಿ ರಿವಾಬಾಗೆ ಟಿಕೆಟ್ ನೀಡಿತ್ತು.
ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೇ, ರಿವಾಬಾ ಜಡೇಜ ಬೃಹತ್ ರೋಡ್ ಶೋದಲ್ಲಿ ಭಾಗಿಯಾದರು.