ಸುಳ್ಯ: ಜೀಪು ಚಾಲಕನ ಅವಾಂತರ, ಸರಣಿ ಅಪಘಾತದಲ್ಲಿ ನಾಲ್ಕು ದ್ವಿಚಕ್ರ ವಾಹನ, ಒಂದು ಕಾರು ಜಖಂ
ಸುಳ್ಯ ನಗರದ ಅಂಬಟಡ್ಕದಲ್ಲಿ ಜೀಪು ಚಾಲಕನ ಅವಾಂತರಕ್ಕೆ ನಾಲ್ಕು ಬೈಕ್ ಮತ್ತು ಒಂದು ಕಾರು ಹಾನಿಯಾದ ಘಟನೆ ವರದಿಯಾಗಿದೆ.

ಡಿ.1 ರಂದು ಸಂಜೆ 7 ಗಂಟೆ ಸುಮಾರಿಗೆ ಸುಳ್ಯದ ಮುಖ್ಯರಸ್ತೆಯಿಂದ ರಥಬೀದಿಯಾಗಿ ಬಂದ ಜೀಪು ಚೆನ್ನಕೇಶವ ದೇವಸ್ಥಾನದ ಬಳಿ ಹಾಕಲಾಗಿರುವ ಬ್ಯಾರಿ ಕೇಡ್ ಗೆ ಡಿಕ್ಕಿ ಹೊಡೆದು ಅಲ್ಲಿಂದ ವೇಗವಾಗಿ ಬಂದು ಅಂಬಟಡ್ಕ ನವರತ್ನ ಹೋಟೇಲ್ ಮುಂಭಾಗದಲ್ಲಿ ನಿಲ್ಲಿಸಿದ್ದ ನಾಲ್ಕು ಬೈಕ್ ಮತ್ತು ಕಾರಿಗೆ ಡಿಕ್ಕಿಹೊಡೆದು ನಿಂತಿದೆ.

ಈ ಅಪಘಾತಕ್ಕೆ ಜೀಪು ಚಾಲಕ ಅತೀವ ಮದ್ಯ ಸೇವನೆಯೇ ಕಾರಣವೆಂದು ಸ್ಥಳೀಯರು ಹೇಳಿದ್ದಾರೆ.
ನಂದಾದೀಪ ಹೆಸರಿನ ಜೀಪ್ ಇದಾಗಿದ್ದು ಸ್ಥಳಕ್ಕೆ ಸುಳ್ಯ ಪೋಲಿಸರು ಧಾವಿಸಿ ಎಲ್ಲಾ ವಾಹನಗಳನ್ನು ಠಾಣೆಗೆ ಒಯ್ಯಲಾಗಿದೆ ಎಂದು ತಿಳಿದು ಬಂದಿದೆ.