ನಾಯಿ,ಬೆಕ್ಕಿನ ಮರಿಗಳನ್ನು ರಸ್ತೆಗೆ ತಂದು ಬಿಡುವವರಿಗೆ
ಖಡಕ್ ಎಚ್ಚರಿಕೆಯ ಬ್ಯಾನರ್ ಅಳವಡಿಸಿದ ಗ್ರಾಮಸ್ಥರು
ಪುತ್ತೂರು: ನಾಯಿ ಮರಿ, ಬೆಕ್ಕಿನ ಮರಿಗಳನ್ನು ರಸ್ತೆಗೆ ತಂದು ಬಿಡುವವರ ವಿರುದ್ಧ ಖಡಕ್ ಎಚ್ಚರಿಕೆಯ ಬ್ಯಾನರ್‌ವೊಂದು ಅಮ್ಚಿನಡ್ಕ ಸಮೀಪ ರಸ್ತೆ ಬದಿಯಲ್ಲಿ ರಾರಾಜಿಸುತ್ತಿದೆ. ಹೆಣ್ಣು ನಾಯಿ ಮರಿಗಳನ್ನು ಹಾಗೂ ಬೆಕ್ಕಿನ ಮರಿಗಳನ್ನು ರಸ್ತೆಗೆ ಬಿಡುವವರ ವಿರುದ್ಧ ಆಕ್ರೋಶಿತಗೊಂಡವರು ಈ ಬ್ಯಾನರ್ ಅನ್ನು ಅಳವಡಿಸಿದ್ದಾರೆ ಎನ್ನಲಾಗಿದೆ. ಇಲ್ಲಿ ನಾಯಿ ಬೆಕ್ಕು ಮರಿಗಳನ್ನು ಬಿಟ್ಟು ಹೋಗುವವರು ತಮ್ಮ ಹೆಂಡತಿ ಮಕ್ಕಳನ್ನು ಬಿಟ್ಟು ಹೋಗಿ ನಾವು ಸಾಕುತ್ತೇವೆ ಎಂದು ಬರೆದು ಬ್ಯಾನರ್ ಅಳವಡಿಸಲಾಗಿದೆ.
ನಿರ್ಜನ ಪ್ರದೇಶಗಳಲ್ಲಿ ನಾಯಿ ಮರಿಗಳನ್ನು ಬಿಟ್ಟು ಹೋಗುತ್ತಿದ್ದು ಅವುಗಳು ಅನ್ನ ನೀರು ಇಲ್ಲದೆ ಸಾಯುತ್ತವೆ ಅಥವಾ ಯಾವುದಾದರೂ ವಾಹನದ ಅಡಿಗೆ ಬಿದ್ದು ಸತ್ತು ಹೋಗುತ್ತವೆ. ಈ ರೀತಿಯಲ್ಲಿ ನಾಯಿ ಮರಿಗಳನ್ನು, ಬೆಕ್ಕಿನ ಮರಿಗಳನ್ನು ರಸ್ತೆಗೆ ತಂದು ಬಿಡುವುದು ಎಷ್ಟು ಸರಿ ಎನ್ನುವುದು ಪ್ರಾಣಿಪ್ರಿಯರ ಪ್ರಶ್ನೆಯಾಗಿದೆ.
ನಾಯಿ, ಬೆಕ್ಕಿನ ಮರಿಗಳನ್ನು ರಸ್ತೆಗೆ ತಂದು ಬಿಡುವ ಮುಂಚೆ ಸಾಕಷ್ಟು ಬಾರಿ ಯೋಚಿಸಬೇಕಾಗಿದೆ. ಅವುಗಳ ಕೂಡ ತಮ್ಮ ಮನೆಯ ಸದಸ್ಯರಂತೆಯೇ ಎಂಬ ವಿಷಯವನ್ನು ಮನದಟ್ಟು ಮಾಡುವ ರೀತಿಯಲ್ಲಿ ಬ್ಯಾನರ್‌ನಲ್ಲಿ ಬರೆಯಲಾಗಿದೆ. ಒಟ್ಟಿನಲ್ಲಿ ನಾಯಿ,ಬೆಕ್ಕಿನ ಮರಿಗಳನ್ನು ರಸ್ತೆಗೆ ತಂದು ಬಿಡುವವರ ಮನಸ್ಸಿಗೆ ಎಷ್ಟು ಅರ್ಥವಾಗುತ್ತೋ ಗೊತ್ತಿಲ್ಲ…?!